ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಲಿವುಡ್ ನಟಿ ಮರ್ಲಿನ್ ಮನ್ರೋ ರೀತಿ ಫೋಸ್ ಕೊಡಲು ಹೋಗಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಡಲ ತೀರದಲ್ಲಿ ನಿಂತು ಶಿಲ್ಲಾ ಶೆಟ್ಟಿ ತನ್ನ ಎರಡು ಕೈಗಳನ್ನು ತಿರುವುತ್ತಾ ಪೋಸ್ ಕೊಡುತ್ತಿದ್ದರು. ಈ ವೇಳೆ ಜೋರಾಗಿ ಗಾಳಿ ಬಂದಿದ್ದರಿಂದ ಆಕೆ ತೊಟ್ಟಿದ್ದ ಬಟ್ಟೆ ತೊಡೆಯ ಮೇಲಕ್ಕೆ ಹಾರಿತು.
ನಟಿ ಶಿಲ್ಪಾ ಅವರು ‘ಕ್ರೂಸ್’ನ ಹೊರಾಂಗಣದಲ್ಲಿ ಫೋಟೋ ಶೂಟ್ ಮಾಡಿಸುತ್ತಿದ್ದರು. ಆಗ ಖ್ಯಾತ ಬಾಲಿವುಡ್ ನಟಿ ‘ಮರ್ಲಿನ್ ಮನ್ರೋ’ ರೀತಿ ಫೋಸ್ ಕೊಡುತ್ತಿದ್ದರು. ಈ ವೇಳೆ ಗಾಳಿ ಜೋರಾಗಿ ಬೀಸಿದೆ. ಇದರಿಂದ ಅವರ ಡ್ರೆಸ್ ಗಾಳಿಗೆ ಹಾರಿದೆ. ತಕ್ಷಣ ಶಿಲ್ಪಾ ಶೆಟ್ಟಿ ಅವರು ಡ್ರೆಸ್ ಸರಿಪಡಿಸಿಕೊಂಡು ನಕ್ಕಿದ್ದಾರೆ. ಈ ವಿಡಿಯೋವನ್ನು ಶಿಲ್ಪಾ ಶೆಟ್ಟಿ ಅವರು ಇನ್ಸ್ ಸ್ಟಾಗ್ರಾಂಗೆ ಪೋಸ್ಟ್ ಮಾಡಿದ್ದು, ಜೊತೆಗೆ ನನ್ನ ‘ಮರ್ಲಿನ್ ಮನ್ರೋ’ ಕ್ಷಣ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಶಿಲ್ಪಾ ಎಚ್ಚರವಹಿಸದಿದ್ದರೆ ಮುಂದೆ ಏನಾಗುತ್ತಿತ್ತು ಎಂದು ವಿವರಿಸುತ್ತಾ ನಟಿಯನ್ನು ಅಣಕಿಸುತ್ತಿದ್ದಾರೆ.
Discussion about this post