ನಟಿ ನಿರೂಪಕಿ ಬಿಗ್ ಬಾಸ್ ಸ್ಪರ್ಧಿ ಶೀತಲ್ ಶೆಟ್ಟಿ ಇದೀಗ ಟ್ರೋಲ್ ಪೇಜ್ ಗಳ ಮೇಲೆ ಬೆಂಕಿ ಕಾರಲಾರಂಭಿಸಿದ್ದಾರೆ. ಅದರಲ್ಲೂ ಡಬ್ಬಲ್ ಮೀನಿಂಗ್ ಬಳಸುವ, ಹೆಣ್ಣು ಮಕ್ಕಳ ಅಂಗಾಂಗಳನ್ನೇ ಇಟ್ಟುಕೊಂಡು ಟ್ರೋಲ್ ಮಾಡೋ ಪೇಜುಗಳೇ ಅವರ ಟಾರ್ಗೇಟ್.
ಹಾಗೇ ನೋಡಿದರೆ ಶೀತಲ್ ಎತ್ತಿರುವ ಪ್ರಶ್ನೆಗಳು ಸರಿಯಾಗಿಯೇ ಇದೆ. ಹೆಣ್ಣು ಮಕ್ಕಳಿರುವ ಮನೆಯಿಂದ ಬಂದವರಿಗೆ ಹೆಣ್ಣು ಮಕ್ಕಳ ಅಂಗಾಂಗಳ ಬಗ್ಗೆ ಟ್ರೋಲ್ ಮಾಡಲು ಮನಸ್ಸಾದರೂ ಹೇಗೆ ಬರುತ್ತದೆ. ಈ ಕಾರಣಕ್ಕಾಗಿ ಒಬ್ಬ ಮಹಿಳೆಯಾಗಿ ಅವರು ದನಿ ಎತ್ತಿದ್ದಾರೆ.
ಆದರೆ ಅದೇನಾಯ್ತೋ ಗೊತ್ತಿಲ್ಲ. ಅವರು ಎತ್ತಿದ ಪ್ರಶ್ನೆ ಅವರಿಗೆ ತಿರುಮಂತ್ರವಾಗತೊಡಗಿದೆ. ಶೀತಲ್ ಶೆಟ್ಟಿಯವರು ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಬಳಸಿದ ಪದಗಳನ್ನು ಜನ ಕೆದಕತೊಡಗಿದ್ದಾರೆ.

ಅಷ್ಟು ಮಾತ್ರವಲ್ಲದೆ ನಿಮ್ಮದೇ ಟಿವಿ ವಾಹಿನಿಗಳು ಮಾಡುತ್ತಿರುವುದೇನು. ಜಾರಕಿಹೊಳಿ ಸಿಡಿ ವಿಚಾರದಲ್ಲಿ ಮಾಧ್ಯಮಗಳ ನಡೆ ನೋಡಿದ್ರೆ ಗೊತ್ತಾಗೋದಿಲ್ವ, ಹೆಣ್ಣು ಮಕ್ಕಳ ಗೌರವ ಎಷ್ಟಿದೆ ಎಂದು. ಟಿವಿ ವಾಹಿನಿಗಳನ್ನು ಮೊದಲು ಪ್ರಶ್ನೆ ಮಾಡಿ, ಅದ್ಯಾಕೆ ನಿಮ್ಮದೇ ಕ್ಷೇತ್ರದ ಮಂದಿಯನ್ನು ಪ್ರಶ್ನಿಸುತ್ತಿಲ್ಲ ಎಂದು ಮರು ಪ್ರಶ್ನೆ ಎಸೆದಿದ್ದಾರೆ.

ಇಲ್ಲಿ ಬಂದಿರುವ ಕಮೆಂಟ್ ಗಳನ್ನು ನೋಡಿದ್ರೆ ಶೀತಲ್ ಶೆಟ್ಟಿಯ ಕಾಳಜಿಗೆ ಸಿಕ್ಕ ಗೌರವದ ಅರಿವಾಗುತ್ತದೆ.


Discussion about this post