Thursday, March 4, 2021

ತುಲಾಭಾರ ತಕ್ಕಡಿಯ ಸರಪಣಿ ಬಿದ್ದು ಆಸ್ಪತ್ರೆ ಸೇರಿದ ಶಶಿ ತರೂರ್

Must read

- Advertisement -
- Advertisement -

ತಿರುವನಂತಪುರಂ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ತಾವು ಸ್ಥಳೀಯ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನದಲ್ಲಿ ತೊಡಗಿದ್ದಾಗ ಗಾಯಗೊಂಡಿದ್ದಾರೆ.

ಸಾಂಪ್ರದಾಯಿಕ ಹೊಸ ವರ್ಷಾಚರಣೆ ಹಬ್ಬವಾಗಿರುವ ವಿಷು ಸಂಭ್ರಮದ ಕಾರಣ ಶಶಿ ತರೂರ್ ಪ್ರಸಿದ್ದ ಗಾಂಧಾರಿ ಅಮ್ಮ ನ್ ದೇವಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ಅವರು ತುಲಾಭಾರ ಸೇವೆ ನೆರವೇರಿಸಲು ಮುಂದಾದಾಗ ತುಲಾಭಾರಕ್ಕಾಗಿ ಹಾಕಲಾಗಿದ್ದ ತಕ್ಕಡಿಯ ಕಬ್ಬಿಣದ ಸರಪಣಿಗಳು ತುಂಡಾಗಿ ಅವರ ತಲೆ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ರಾಜ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ..

ಈಗ ತರೂರ್ ಅವರ ತಲೆಗೆ ಎಂಟು ಹೊಲಿಗೆಗಳನ್ನು ಹಾಕಲಾಗಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತರೂರ್ ಬಿಜೆಪಿಯಿಂದ ಮಿಜೋರಾಂ ಮಾಜಿ ರಾಜ್ಯಪಾಲ ಕೆ. ರಾಜಶೇಖರನ್ ಹಾಗೂ ಸಿಪಿಐ ನಿಂದ ಸಿ.ವಿ. ದಿವಾಕರನ್ ಅವರನ್ನು ಎದುರಿಸಬೇಕಿದೆ.

- Advertisement -
- Advertisement -
- Advertisement -

Latest article