ಬೆಂಗಳೂರು : ಕರ್ನಾಟಕದ ಪ್ರಸ್ತುತ ಪರಿಸ್ಥಿತಿ ನೋಡಿದರೆ ಮಹಾರಾಷ್ಟ್ರ ಕೇರಳ ರೀತಿಯಲ್ಲಿ ಕೊರೋನಾ ಅಟ್ಟಹಾಸ ಮೆರೆದರೆ ಅಚ್ಚರಿ ಪಡಬೇಕಾಗಿಲ್ಲ.
ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ ಹಾಗೂ ಜನರ ಉಡಾಫೆ ನಡವಳಿಕೆಯಿಂದ ಕೊರೋನಾ ಸೋಂಕಿನ ಎರಡನೇ ಅಲೆ ಪ್ರಾರಂಭವಾಗಿದೆ.
ಈಗ್ಲೇ ಇದನ್ನು ಹೊಸಕಿ ಹಾಕದಿದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಅಪಾಯವನ್ನು ಕಾಣಬೇಕಾಗುತ್ತದೆ.ಜೊತೆಗೆ ಕೊರೋನಾ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿರುವುದು ಕೂಡಾ ಎರಡನೆ ಅಲೆಗೆ ಮತ್ತಷ್ಟು ಸಹಕಾರ ಕೊಟ್ಟಂತೆ.
ಈ ನಡುವೆ ರಾಜ್ಯದಲ್ಲಿ ಶಾಲಾ ಕಾಲೇಜುಗಳ ಹಾಸ್ಟೆಲ್ ಗಳೇ ಕೊರೋನಾ ಹಾಟ್ ಸ್ಪಾಟ್ ಗಳಾಗಿ ಪರಿವರ್ತನೆಯಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೊರೋನಾ ಸೋಂಕು ಎಲ್ಲಿ ಹೆಚ್ಚಿದೆ ಎಂದು ನೋಡಿದರೆ ಅದು ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲಿ.
ಇವರಲ್ಲಿ ಬಹುತೇಕರು ಹೊರ ರಾಜ್ಯಗಳಿಂದ ಬಂದು ಹಾಸ್ಟೆಲ್ ಗಳಲ್ಲಿ ಉಳಿದುಕೊಂಡವರಾಗಿದ್ದಾರೆ. ಅದರಲ್ಲೂ ಕೇರಳದಿಂದ ಬಂದ ವಿದ್ಯಾರ್ಥಿಗಳಿಂದಲೇ ಸೋಂಕು ಹರಡುತ್ತಿದೆ ಅನ್ನುವುದು ಗಮನಾರ್ಹ ಅಂಶ.
ಕಾಲೇಜುಗಳಲ್ಲೇ ಅತೀ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದರೂ ಆಫ್ ಲೈನ್ ಕ್ಲಾಸ್ ಗಳನ್ನು ರದ್ದುಗೊಳಿಸಿ ಆನ್ ಲೈನ್ ತರಗತಿ ಪ್ರಾರಂಭಿಸುವ ಬಗ್ಗೆ ಇನ್ನೂ ಚಿಂತನೆಯನ್ನೇ ಮಾಡಿಲ್ಲ.
ವಿದ್ಯಾರ್ಥಿಗಳ ಮನೆಯಲ್ಲಿ ವಯಸ್ಸಾದ ಪೋಷಕರು ಇರುತ್ತಾರೆ ಅನ್ನುವ ಜ್ಞಾನವೂ ಶಿಕ್ಷಣ ಇಲಾಖೆಗ ಇರುವಂತೆ ಕಾಣಿಸುತ್ತಿಲ್ಲ.
ವಿದ್ಯಾರ್ಥಿಗಳ ಕಾರಣದಿಂದ ಕೊರೋನಾ ಸೋಂಕು ವ್ಯಾಪಕವಾಗಿ ಹರಡಬಹುದು ಎಂದು ಗೊತ್ತಿದ್ದರೂ ಆರೋಗ್ಯ ಇಲಾಖೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಸರ್ಕಾರ ಆದೇಶ ಹೊರಡಿಸುವ ತನಕ ಕಾದರೆ ಕೊರೋನಾ ಸೋಂಕಿನ ಎರಡನೆ ಅಲೆ ಹಿಂಡಿ ಹಿಪ್ಪೆ ಮಾಡಿಯಾಗಿರುತ್ತದೆ.
ಹೀಗಾಗಿ ನಮ್ಮ ಎಚ್ಚರಿಕೆಯನ್ನು ನಾವಿರುವುದು ಒಲಿತು, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಗಳನ್ನು ಮರೆಯದೇ ಬಳಸಬೇಕು.
Discussion about this post