ಮಂಗಳೂರು : ಬಿಜೆಪಿ ಮತ್ತು ಎಸ್ ಡಿ ಪಿ ಐ ರಾಜಕೀಯ ವಿರೋಧಿಗಳು ಅನ್ನುವುದು ಎಲ್ಲರಿಗೂ ಗೊತ್ತಿದೆ.
ಮಾತ್ರವಲ್ಲದೆ ಎಸ್ ಡಿ ಪಿಐ ವಿರುದ್ಧ ಬಿಜೆಪಿ ನಾಯಕರು ಪ್ರತೀ ಸಲ ಕೆಂಡ ಕಾರುತ್ತಾರೆ.
ದುರಂತ ಅಂದ್ರೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಮತ್ತು ಎಸ್ ಡಿ ಪಿ ಐ ಬೆಂಬಲಿತರು ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದಾರೆ.
ಪಾವೂರು ಗ್ರಾಮ ಪಂಚಾಯತ್ ನಲ್ಲಿ ಯಾವ ಪಕ್ಷದ ಬೆಂಬಲಿಗರೂ ಸ್ಪಷ್ಟ ಬಹುಮತ ಪಡೆದಿರಲಿಲ್ಲ.
ಕಾಂಗ್ರೆಸ್ ಬೆಂಬಲಿತರು 5 ಸ್ಥಾನ ಪಡೆದರೆ, ಬಿಜೆಪಿ 4 ಸ್ಥಾನಗಳನ್ನು ಪಡೆದಿತ್ತು. 6 ಸ್ಥಾನಗಳಲ್ಲಿ ಎಸ್ ಡಿ ಪಿ ಐ ಗೆಲುವು ಖಂಡಿತ್ತು.
ಕಾಂಗ್ರೆಸ್ ಅಧಿಕಾರದ ಸಲುವಾಗಿ ಯಾರೊಂದಿಗೂ ಮೈತ್ರಿಗೆ ಒಪ್ಪಿರಲಿಲ್ಲ. ಆದರೆ ಬಿಜೆಪಿ ಬೆಂಬಲಿಗರು ಎಸ್ ಡಿ ಪಿ ಐ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾದರ್ ಇದರಲ್ಲಿ ಅಚ್ಚರಿ ಏನಿಲ್ಲ, ಎಸ್ ಡಿ ಪಿ ಐ ಮತ್ತು ಬಿಜೆಪಿ ಮಾತಿಗೆ ಮಾತ್ರ ವಿರೋಧಿಗಳು, ಒಳಗೊಳಗೆ ಅವರೆಲ್ಲಾ ಒಂದೇ. ಚುನಾವಣೆಗೆ ಮೊದಲೇ ಇವರಿಬ್ಬರು ಒಳ ಒಪ್ಪಂದ ಮಾಡಿಕೊಂಡಿದ್ದರು ಅಂದಿದ್ದಾರೆ.
ಮಜಾ ಅಂದ್ರೆ, ಈ ಹಿಂದೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದ ಎಸ್ ಡಿ ಪಿ ಐ ಮುಖಂಡರೊಬ್ಬರು ತಾಂಟ್ರೆ ಬಾ ತಾಂಟ್ ಅಂದಿದ್ದರು. ಇದನ್ನು ಬಿಜೆಪಿ ಕಾರ್ಯಕರ್ತರೇ ಅತೀ ಹೆಚ್ಚು ಟ್ರೋಲ್ ಮಾಡಿದ್ದರು.
ಇದೀಗ ತಾಂಟಲು ಕರೆದವರ ಜೊತೆಗೆ ಸಂಬಂಧ ಬೆಳೆಸಿಕೊಂಡಿರುವುದು ವಿಪರ್ಯಾಸವೇ ಸರಿ.
Discussion about this post