ಬೆಂಗಳೂರು : ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಗೆ ಸಂಗೀತ ಅಂದ್ರೆ ಅಚ್ಚುಮೆಚ್ಚು. ಈ ಬಗ್ಗೆ ಅನೇಕ ಬಾರಿ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಮಗಳ ಬಗ್ಗೆ ಭಾವುಕರಾಗಿ ಮಾತನಾಡುವ ಸಂದರ್ಭದಲ್ಲಿ ಮಗಳ ಸಂಗೀತ ಪ್ರೀತಿಯನ್ನು ಹೇಳದಿರುತ್ತಿರಲಿಲ್ಲ.
ಕಳೆದ ವರ್ಷ ಬಿಗ್ ಬಾಸ್ ಮನೆಯಲ್ಲಿದ್ದ ವಾಸುಕಿ ವೈಭವ್, ಬಿಗ್ ಬಾಸ್ ಮನೆಯಲ್ಲೇ ಕಟ್ಟಿದ್ದ ‘ಮನಸ್ಸಿಂದ ಯಾರೂ ಕೆಟ್ಟವರಲ್ಲ’ ಹಾಡಿಗೆ ತಂದೆ ಸುದೀಪ್ ಅವರಂತೆ ಸಾನ್ವಿಯೂ ಮನ ಸೋತಿದ್ದರು. ಮಾತ್ರವಲ್ಲದೆ ಇದೇ ಹಾಡಿಗೆ ಸುದೀಪ್ ದನಿ ಕೊಟ್ಟು ಕೇವಲ ವಾಸುಕಿ ಮಾತ್ರ ಇಡೀ ಕನ್ನಡಿಗರಿಗೆ ಸರ್ ಪ್ರೈಸ್ ಕೊಟ್ಟಿದ್ದರು.
ಇದೇ ಹಾಡಿಗೆ ಸಾನ್ವಿ ದನಿ ನೀಡಿದ್ದರು. ಜೊತೆಗೆ ವಾಸುಕಿ ಅವರೊಂದಿಗೆ ಫೋಟೋ ಹಾಕಿ ಇವರೇ ನನ್ನ ಸ್ಪೂರ್ತಿ ಅಂದಿದ್ದರು.
ಇದಾದ ಬಳಿಕ ಸುದೀಪ್ ಅವರ ಮಾತ್ ಮಾತಲ್ಲಿ ಚಿತ್ರದ ಮುಂಜಾನೆ ಮಂಜಲ್ಲಿ ಹಾಡಿಗೂ ಸಾನ್ವಿ ದನಿ ನೀಡಿದ್ದರು. ಅಗ್ಲೇ ಸಾನ್ವಿ ಹಾಡುಗಾರ್ತಿಯಾಗುವ ಸುಳಿವು ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಯೂ ಟ್ಯೂಬ್ ಗೆ ಎಂಟ್ರಿ ಕೊಟ್ಟಿರುವ ಸಾನ್ವಿ ಸುದೀಪ್ Rise up by Andra Day ಹಾಡಿಗೆ ದನಿ ಕೊಟ್ಟಿದ್ದಾರೆ.
ಈ ಹಾಡಿಗೆ ತಲೆ ತೂಗಿರುವ ಕಾರ್ತಿಕ್ ಜಯರಾಮ್ ಇನ್ಸ್ಟಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು , ನಾನು 11 ವರ್ಷಗಳಿಂದ ಈ ಮಗುವನ್ನು ಬಲ್ಲೆ. ಆದರೆ ಈಕೆಗೆ ವಿಶೇಷ ದನಿ ಇದೆ ಎಂದು ನಾನು ಅಂದುಕೊಂಡಿರಲಿಲ್ಲ. ಈಕೆಗೆ ದೇವರು ಕೊಟ್ಟ ಆಶೀರ್ವಾದಕ್ಕಿಂತ ಆಕೆಗಿದ್ದ ಸಂಗೀತದ ಒಲವು ಮತ್ತು ಆಕೆಯ ಹಾರ್ಡ್ ವರ್ಕ್ ಆಕೆಯನ್ನು ಸಂಗೀತಗಾರ್ತಿಯಾಗಿ ರೂಪಿಸಿದೆ ಎಂದು ಶುಭ ಹಾರೈಸಿದ್ದಾರೆ.
Discussion about this post