ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಆಲಿಯಾಸ್ ಮಹಿರಾ ಕೆಲ ವಾರಗಳ ಹಿಂದಷ್ಟೇ ಜಾಮೀನು ಮೇಲೆ ಹೊರ ಬಂದಿದ್ದಾರೆ.
ಆರೋಗ್ಯದ ಕಾರಣದಿಂದಲೇ ಜಾಮೀನು ಪಡೆದಿದ್ದ ಸಂಜನಾ, ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿದ್ದರು. ಆದರೆ ಅವರ ಆರೋಗ್ಯ ಸಮಸ್ಯೆ ಕುರಿತಂತೆ ಯಾವುದೇ ಪ್ರಸ್ತಾಪವಾಗಿರಲಿಲ್ಲ.
ಇದೀಗ ಜೈಲಿನಿಂದ ಹೊರಬಂದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಯಾವ ಆಸ್ಪತ್ರೆ, ಅದ್ಯಾವ ಯಾವ ಕಾರಣಕ್ಕಾಗಿ ಅವರು ಆಸ್ಪತ್ರೆ ಸೇರಿದ್ದಾರೆ ಎಂದು ಗೊತ್ತಾಗಿಲ್ಲ.
ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಜನಾ ಹಿಂದಿಗಿಂತಲೂ ಬಲವಾಗಿ ಮರಳುವ ಸಲುವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಅಂದಿದ್ದಾರೆ
Discussion about this post