ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಇದೀಗ ತನಿಖೆ ಮುಗಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಜಾರ್ಜ್ ಶೀಟ್ ನಲ್ಲಿ ಡ್ರಗ್ಸ್ ದಂಧೆಕೋರರ ಬಗ್ಗೆ ಹಲವು ಆರೋಪಗಳನ್ನು ಹೊರಿಸಲಾಗಿದೆ. ಜೊತೆಗೆ ಅದಕ್ಕೆ ಸಾಕ್ಷಿಗಳನ್ನು ಕೂಡಾ ಪೊಲೀಸರು ಕೊಟ್ಟಿದ್ದಾರೆ.
ನೈಜೀರಿಯಾ ಪ್ರಜೆ ಜಾನ್ ಅಲಿಯಾಸ್ ಬೆನಾಲ್ಡ್ ಉಡೇನ್ನಾ ಎಂಬಾತನಿಂದ ಕೊಕೇನ್, ಎಂಡಿಎಂಎ ಹಾಗೂ ಗಾಂಜಾ ತರಿಸಿಕೊಳ್ಳುತ್ತಿದ್ದ ಸಂಜನಾ ಅನೇಕ ಪಾರ್ಟಿ ಮಾಡುತ್ತಿದ್ದಳು ಎಂದು ಗೊತ್ತಾಗಿದೆ.
2017ರ ಅಕ್ಟೋಬರ್ನಲ್ಲಿ ಕೋರಮಂಗಲದ ವಾಲ್ಸ್ಟ್ರೀಟ್ ಕ್ಲಬ್ನಲ್ಲೂ ಆಯೋಜಿಸಿದ್ದ ಪಾರ್ಟಿಯಲ್ಲ್ಲೂ ಡ್ರಗ್ಸ್ ಸೇವನೆ ನಡೆದಿದೆ. ಮಾತ್ರವಲ್ಲದೆ 2018ರ ಫೆಬ್ರುವರಿ 14 ರಂದು ‘ಪ್ರೇಮಿಗಳ ದಿನಾಚರಣೆ’ ಹೆಸರಿನಲ್ಲಿ JW ಮ್ಯಾರಿಯೇಟ್ ಹೋಟೆಲ್ನಲ್ಲಿ ವೈಭವ್ ಕುಮಾರ್ ಜೈನ್ ಪಾರ್ಟಿ ಆಯೋಜಿಸಿದ್ದ. ಇದೇ ಪಾರ್ಟಿಯಲ್ಲಿ ಸಂಜನಾ ಬಾಯಿಗೆ ವೈಭವ್ ಡ್ರಗ್ಸ್ ಮಾತ್ರೆ ಹಾಕಿದ್ದನಂತೆ.
ಇನ್ನು ಪ್ಲೇಟ್ನಲ್ಲಿ ಕೊಕೇನ್ ಸುರಿದು ಅದನ್ನು ಮೂಗಿನಿಂದ ಎಳೆದು ನಶೆ ಏರಿಸಿಕೊಳ್ಳುತ್ತಿದ್ದಳು ಅನ್ನುವ ಅಂಶವನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ರಾಗಿಣಿ ಕೂಡಾ ಮೂಗಿನಲ್ಲೇ ಮಜಾ ಬರಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
Galrani allegedly organised parties at her house and supplied drugs to the invitees and she also consumed drugs. She has also visited the residence of other accused from where drugs were seized. “The petitioner has amassed huge wealth in the illicit drug
Discussion about this post