ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣ ಸಂಬಂಧ ಇದೀಗ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಇಷ್ಟು ದಿನಗಳ ಕಾಲ ನಮಗೂ ಡ್ರಗ್ಸ್ ಗೂ ಯಾವುದೇ ಸಂಬಂಧವಿಲ್ಲ ಅನ್ನುತ್ತಿದ್ದ ರಾಗಿಣಿ ಮತ್ತು ಸಂಜನಾ ಅವರಿಗೆ ಹೈದರಬಾದ್ ನಿಂದ ಬಂದಿರುವ FSL ರಿಪೋರ್ಟ್ ಶಾಕ್ ಕೊಟ್ಟಿದೆ. ಸಿಸಿಬಿ ಪೊಲೀಸರು ಕಳುಹಿಸಿದ್ದ ತಲೆ ಕೂದಲ ಲ್ಯಾಬ್ ರಿಪೋರ್ಟ್ ಸಿಸಿಬಿ ಪೊಲೀಸರ ಕೈ ಸೇರಿದ್ದು, ಡ್ರಗ್ಸ್ ದಂಧೆಯ ಆರೋಪಿಗಳು ಪಾಸಿಟಿವ್ ಎಂದು ಗೊತ್ತಾಗಿದೆ.
ಇದೀಗ ಲ್ಯಾಬ್ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬೆನ್ನಲ್ಲೇ ನಟಿಯರು ಸೇರಿದಂತೆ ಅನೇಕ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಸಿಸಿಬಿ ಪೊಲೀಸರು ಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿದೆ. ಈಗಾಗಲೇ ರಾಗಿಣಿ ಹಾಗೂ ಸಂಜನಾ ಅನಾರೋಗ್ಯದ ಕಾರಣ ಜಾಮೀನು ಪಡೆದಿದ್ದಾರೆ. ಒಂದು ವೇಳೆ ನ್ಯಾಯಾಲಯ ಜಾಮೀನು ರದ್ದುಗೊಳಿಸಿದರೆ ಆರೋಪಿಗಳು ಮತ್ತೆ ಜೈಲು ಸೇರಬೇಕಾಗುತ್ತದೆ.

ಈ ನಡುವೆ 33ನೇ ಸಿಸಿಹೆಚ್ ಕೋರ್ಟ್ ಗೆ ಸಲ್ಲಿಕೆಯಾಗಿರುವ ಆರೋಪಪಟ್ಟಿಯಲ್ಲಿ ನಟಿ ರಾಗಿಣಿ ಮೂಗಿನಲ್ಲಿ ಕೋಕೇನ್ ಸೇವಿಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆಯಂತೆ. ಇದಕ್ಕಾಗಿ ಎಟಿಎಂ ಕಾರ್ಡ್, ನೋಟುಗಳನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.ನೋಟಿನ ಮೂಲಕವೇ ಅವರು ಕೊಕೇನ್ ಪೌಡರ್ ಅನ್ನು ಮೂಗಿಗೆ ಸೇರಿಸುತ್ತಿದ್ದರು ಅನ್ನುವುದು ಸಿಕ್ಕಿರುವ ಮಾಹಿತಿ.
Discussion about this post