ಸಾಲುಮರದ ತಿಮ್ಮಕ್ಕ ’ನ್ಯಾಷನಲ್ ಗ್ರೀನರಿ ಅವಾರ್ಡ್’ ಪ್ರದಾನ
ಯಾವುದೇ ಸ್ವಾರ್ಥವಿಲ್ಲದೇ ಮರಗಳನ್ನೆ ಮಕ್ಕಳೆಂದು ಭಾವಿಸಿ ಮನುಕುಲವನ್ನು ರಕ್ಷಿಸುವ ಬಹುದೊಡ್ಡ ಕೆಲಸವನ್ನು ಸಾಲುಮರದ ತಿಮ್ಮಕ್ಕನವರು ಮಾಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವೃಕ್ಷಮಾತೆ, ಪದ್ಮಶ್ರೀ, ನಾಡೋಜ ಸಾಲುಮರದ ತಿಮ್ಮಕ್ಕ ರವರ ೧೧೩ನೇ ವರ್ಷದ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ’ನ್ಯಾಷನಲ್ ಗ್ರೀನರಿ ಅವಾರ್ಡ್’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಹುತೇಕ ದೇಶಗಳಲ್ಲಿ ಅಗ್ನಿ ಅವಘಡದಿಂದ ಕಾಡು ನಾಶವಾಗಿದ್ದು ಅರಣ್ಯ ಭೂಮಿ ಕ್ಷೀಣಿಸುತ್ತಿದೆ. ಇದು ಮನುಕುಲಕ್ಕೆ ಅಪಾಯಕಾರಿ. ಸಾಲುಮರದ ತಿಮ್ಮಕ್ಕನಿಗೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲದಿದ್ದರೂ ಮರಗಳನ್ನು ಮಕ್ಕಳೆಂದು ಭಾವಿಸಿ ಬೆಳೆಸುವ ಮುಖೇನ ಮನುಕುಲವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.