ಪನಾಮ ಪೇಪರ್ಸ್ ರೀತಿಯಲ್ಲೇ ಪಂಡೋರಾ ಪೇಪರ್ಸ್ ನಲ್ಲಿ ಅನೇಕ ಸೆಲೆಬ್ರೆಟಿಗಳ ಹಣಕಾಸು ವ್ಯವಹಾರ ಕುರಿತಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (ICIJ)ವನ್ನು ಪಂಡೋರಾ ಪೇಪರ್ಸ್ ಎಂದು ಕರೆಯಲಾಗುತ್ತದೆ. 117 ದೇಶಗಳ 150 ಮಾಧ್ಯಮಗಳ ಸುಮಾರು 600ಕ್ಕೂ ಹೆಚ್ಚು ಪತ್ರಕರ್ತರು ಈ ಒಕ್ಕೂಟದಲ್ಲಿದ್ದಾರೆ. ಈ ಪಂಡೋರಾ ಪೇಪರ್ಸ್ ಭಾನುವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಕೈಗಾರಿಕೋದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆಗಳು ಬೀದಿಗೆ ಬಂದಿದೆ.
ಈ ಪಂಡೋರಾ ಪೇಪರ್ಸ್ ನಲ್ಲಿ ಜೋರ್ಡಾನ್ ರಾಜ ಅಬ್ದುಲ್ಲಾ II, ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಆಂಡ್ರೆಜ್ ಬಾಬಿಸ್, ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯತ್ತಾ, ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸೊ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಜಿ ಸಹವರ್ತಿಗಳ ಹೆಸರುಗಳಿದ್ದು ಭಾರತದ 300ಕ್ಕೂ ಹೆಚ್ಚು ಗಣ್ಯರ ಹೆಸರುಗಳು ಇದರಲ್ಲಿ ಉಲ್ಲೇಖವಾಗಿದೆ.
ಮಾಹಿತಿ ಪ್ರಕಾರ ಬ್ರಿಟನ್ ನ್ಯಾಯಾಲಯದಲ್ಲಿ ದಿವಾಳಿ ಎಂದು ಘೋಷಿಸಿ ಕೊಂಡಿರುವ ಅನಿಲ್ ಅಂಬಾನಿ ನೀರವ್ ಮೋದಿಯ ಸಹೋದರಿ, ಬಯೋಕಾನ್ ಪ್ರವರ್ತಕ ಕಿರಣ್ ಮಜುಂದಾರ್ ಶಾ ಹಾಗೂ ಅವರ ಪತಿ, ಸಚಿನ್ ತೆಂಡೂಲ್ಕರ್ ಹೀಗೆ ಅನೇಕರು ಸಾಗರೋತ್ತರ ವ್ಯವಹಾರಗಳಲ್ಲಿ ಅನಧಿಕೃತವಾಗಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಅನೇಕ ಬಾಲಿವುಡ್ ನಟ ನಟಿಯರ ಹೆಸರು ಕೂಡಾ ಈ ಪಟ್ಟಿಯಲ್ಲಿದೆ.
Millions of leaked documents dubbed the Pandora Papers and a worldwide journalistic partnership on Sunday claims to have uncovered financial secrets of current and former world leaders, politicians and public officials in 91 countries and territories, including India.
Discussion about this post