ಬೆಂಗಳೂರು : ಒಂದು ಕಡೆ ಶಾಸಕ ಜಮೀರ್ ಮನೆ ಮೇಲೆ ಐಟಿ ದಾಳಿ ನಡೆದಿದೆ ಮತ್ತೊಂದು ಕಡೆ ಕಾಂಗ್ರೆಸ್ ತೊರೆದಿರುವ ರೋಷನ್ ಬೇಗ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿಯಿಂದ ಬಂದ 100ಕ್ಕೂ ಹೆಚ್ಚು ಅಧಿಕಾರಿಗಳು 6 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ ಸಂಜಯನಗರದಲ್ಲಿರುವ ರೋಷನ್ ಬೇಗ್ ಪುತ್ರಿಯ ನಿವಾಸ ಕೂಡಾ ಸೇರಿದೆ.
ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿತ್ತು. ಈ ಸಂಬಂಧ ಆಸ್ತಿಯನ್ನು ಜಪ್ತಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ ಸರಕಾರ ಕೇವಲ 16 ಕೋಟಿಯ ಆಸ್ತಿಯನ್ನು ಮಾತ್ರ ಜಪ್ತಿ ಮಾಡಿತ್ತು.
ಈ ಹಿಂದೆ ಐಎಂಎ ತನಿಖೆ ಸಂದರ್ಭದಲ್ಲಿ ರೋಷನ್ ಬೇಗ್ IMA ಮುಖ್ಯಸ್ಥ ಮನ್ಸೂರ್ ಖಾನ್ ಕಡೆಯಿಂದ 400 ಕೋಟಿ ಹಣವನ್ನು ಪಡೆದಿರುವುದು ಗೊತ್ತಾಗಿದೆ. ಜೊತೆಗೆ ರೋಷನ್ ಬೇಗ್ ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿದೆ. ಇನ್ನು ದಾಳಿಯ ಕುರಿತಂತೆ ಸ್ಥಳೀಯ ಪೊಲೀಸರಿಗೆ ಇಡಿ ಅಧಿಕಾರಿಗಳು ಮಾಹಿತಿ ನೀಡಿಲ್ಲ, ಬದಲಾಗಿ CRPF ಯೋಧರೊಂದಿಗೆ ದಾಳಿ ನಡೆಸಿರುವುದು ಗಮನಾರ್ಹ. ಇನ್ನು ಈ ಪ್ರಕರಣ ಕುರಿತಂತೆ ಸಿಬಿಐ ಕೂಡಾ ತನಿಖೆ ಮುಂದುವರಿಸಿದೆ.
Discussion about this post