ಯಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ “ಅಣ್ತಮ್ಮಾ.. ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡಬೇಕು. ಗಡಿಗಳನ್ನ ಮೀರಿ ಗರಿಗೆದರಬೇಕು. ಸಾಗರದಾಚೆಗೂ ಚಾಚಿ ನಿಲ್ಲಬೇಕು.
ಕನ್ನಡ ಅಂದರೆ ಮೈ ರೋಮ ಎದ್ದೇಳಬೇಕು. ಕನ್ನಡಿಗರು ಅಂದರೆ ಎದೆ ಉಬ್ಬಿಸಿ ನಿಲ್ಲಬೇಕು. ಕನ್ನಡ ಉಳಿಸಿ ಬೆಳಸಿ ಅಂತ ಬೇಡಿಕೊಳ್ಳುವ ಕಾಲ ಹೋಯಿತು. ಈಗೇನಿದ್ದರೂ ಕನ್ನಡ ಕಲಿತು, ಕಲಿಸಿ, ಬಳಸಿ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದು ಶುಭ ಕೋರಿದ್ದಾರೆ.
Discussion about this post