ನಟ ದರ್ಶನ್ ಗೆ 25 ಕೋಟಿ ವಂಚಿಸಲು ಯತ್ನಿಸಿದ ಪ್ರಕರಣದ ಗೊಂದಲ ಇನ್ನೂ ಬಗೆ ಹರಿದಿಲ್ಲ. ಸೆಲೆಬ್ರೆಟಿಗಳ ಪ್ರಕರಣವಾಗಿರುವುದರಿಂದ ಪೊಲೀಸರು ಕೂಡಾ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಜನಸಾಮಾನ್ಯರ ಪ್ರಕರಣವಾಗಿರುತ್ತಿದ್ರೆ ಈ ಸುದ್ದಿ ಇಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ.
ಈ ನಡುವೆ ಉಮಾಪತಿ ಹಾಗೂ ಆರೋಪಿ ಅರುಣಾ ಕುಮಾರಿ ನಡುವಿನ ವಾಟ್ಸಾಪ್ ಚಾಟ್ ಸ್ಕ್ರೀನ್ ಶಾಟ್ ಗಳು ಮಾಧ್ಯಮಗಳ ಕಚೇರಿ ತಲುಪಿದೆ. ಅರುಣಾಕುಮಾರಿ ಕಡೆಯಿಂದ ಇದು ಸೋರಿಕೆಯಾಗಿರುವುದನ್ನು ನೋಡಿದರೆ ನಿರ್ಮಾಪಕ ಉಮಾಪತಿ ಅವರನ್ನು ಸಿಲುಕಿಸುವ ಯತ್ನ ನಡೆಯುತ್ತಿದೆ ಅನ್ನುವುದು ಸ್ಪಷ್ಟ. ಇನ್ನು ಈ ಚಾಟ್ ನಲ್ಲಿ ವ್ಯವಹಾರದ ಮಾಹಿತಿಗಳಿವೆ. ಅದ್ಯಾವುದೋ ವಂಚನೆಯ ವಾಸನೆ ಸಿಕ್ಕಿದ್ದ ಉಮಾಪತಿ ಅದರ ಹಿಂದೆ ಬಿದ್ದಿರುವುದು ಸ್ಪಷ್ಟವಾಗಿದೆ. ದರ್ಶನ್ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ, ಈ ವಂಚನೆಯ ಹಿಂದೆ ದರ್ಶನ್ ಆಪ್ತರೇ ಇರುವ ಸಾಧ್ಯತೆಗಳಿದೆ. ವಂಚಕರ ಇತಿಹಾಸ ಅರುಣಕುಮಾರಿಗೆ ಗೊತ್ತಿತ್ತು ಅನ್ನುವ ಕಾರಣದಿಂದ ದರ್ಶನ್ ಗೆ ಸಹಾಯ ಮಾಡಲು ಹೋದ ಉಮಾಪತಿ ಕೈ ಸುಟ್ಟಿಕೊಂಡಿರುವಂತೆ ಕಾಣಿಸುತ್ತಿದೆ.
ಆದರೆ ಈ ಆಡಿಯೋ ಚಾಟ್ ನಲ್ಲಿ ಕೆಲವೊಂದು ಖಾಸಗಿ ವಿಚಾರಗಳನ್ನು ಅರುಣಕುಮಾರಿ ಪ್ರಸ್ತಾಪಿಸಿದ್ದಾರೆ. ಆದರೆ ಅದಕ್ಕೆ ಉಮಾಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಅರುಣಕುಮಾರಿ ಮಾತಿನ ದಾಟಿ ಗಮನಿಸಿದರೆ ಕೋಟಿಕುಳವನ್ನು ಬುಟ್ಟಿಗೆ ಬೀಳಿಸುವ ಪ್ರಯತ್ನವಿದೆ ಅನ್ನುವಂತೆ ಕಾಣಿಸುತ್ತಿದೆ. ಈ ಬಗ್ಗೆ ಪೊಲೀಸರ ತನಿಖೆಯಿಂದಲೇ ಸ್ಪಷ್ಟ ಉತ್ತರ ಸಿಗಬೇಕಿದೆ.
Discussion about this post