ಕಿರುತೆರೆಯಲ್ಲಿ ಹಿಟ್ ಅನ್ನಿಸಿಕೊಂಡವರು ಚಂದನವನಕ್ಕೆ ಬರಲೇಬೇಕು ಅನ್ನುವುದು ಅಲಿಖಿತ ನಿಯಮ. ಈಗಾಗಲೇ ಕಿರುತೆರೆಯಲ್ಲಿ ಮಿಂಚಿದ ಅನೇಕ ಮಂದಿ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿದ್ದಾರೆ.
ಇದೀಗ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ಕೂಡಾ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅಭಿನಯದ ಸಿನಿಮಾ ಹೀರೋದಲ್ಲಿ ಗಾನವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಅಂದ ಹಾಗೇ ಬಹು ನಿರೀಕ್ಷಿತ ಈ ಸಿನಿಮಾ ಮಾರ್ಚ್ 5 ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅಧಿಕೃತ ಘೋಷಣೆಯನ್ನೂ ಮಾಡಿದ್ದಾರೆ. ಅಲ್ಲಿಗೆ ರಾಬರ್ಟ್ ಮುಂಚೆಯೇ ಹೀರೋ ಎಂಟ್ರಿ ಕೊಡಲಿದೆ.
ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾವನ್ನು ಭರತ್ ರಾಜ್ ಎಂ ನಿರ್ದೇಶಿಸಿದ್ದಾರೆ. ಭರತ್ ರಾಜ್ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.
ವಿಶೇಷ ಅಂದ್ರೆ ಈ ಸಿನಿಮಾದ ಪ್ರಾರಂಭ ಯಾವುದೇ ಸದ್ದು ಮಾಡಿರಲಿಲ್ಲ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದ ರಿಷಬ್ ಲಾಕ್ಡೌನ್ ಸಡಿಲಿಕೆಯಲ್ಲೇ ಎಲ್ಲಾ ಕೆಲಸ ಮುಗಿಸಿದ್ದಾರೆ.
ಲಾಕ್ಡೌನ್ ಆರಂಭವಾಗುತ್ತಿದ್ದಂತೆ ಊರಿಗೆ ಹೋಗಿದ್ದ ರಿಷಬ್ ಸಿನಿಮಾದ ಎಲ್ಲಾ ಕೆಲಸ ಮುಗಿಸಿದ್ದರು.
ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಶೂಟಿಂಗ್ ಮುಗಿಸಿದ್ದರು.
Discussion about this post