ಮದುಮಗಳಂತೆ ಅಲಂಕೃತಗೊಂಡ ಹೆಣ್ಣುಮಗಳು ಸೀರೆಯ ಬ್ಲೌಸ್ ತೊಟ್ಟು, ಮುಡಿಗೆ ಮಲ್ಲಿಗೆ ಮುಡಿದು, ಕೊರಳಿನಲ್ಲಿ ಆಭರಣ ತೊಟ್ಟು ಸೀರೆ ಬದಲು ಝೀನ್ಸ್ ಚಡ್ಡಿ ಹಾಕಿ ಪೋಸು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಚಿತ್ರ ವಿಚಿತ್ರ ಫ್ರೀ ವೆಡ್ಡಿಂಗ್ ಪೋಟೋಶೂಟ್, ವೆಡ್ಡಿಂಗ್ ಪೋಟೋಶೂಟ್, ಬೇಬಿಬಂಪ್ ಪೋಟೋಶೂಟ್ ಗಳ ದರ್ಬಾರ್ ನಡುವೆ ಇದ್ಯಾವುದಪ್ಪ ಹೊಸ ಮದುವೆ ಫೋಟೋ ಶೂಟ್ ಎಂದು ಜನ ತಲೆ ಕೆಡಿಸಿಕೊಂಡಿದ್ದರು. ಕೆಲವರು ಬಾಯಿ ಚಪ್ಪರಿಸಿದ್ದರು ಕೂಡಾ.

ಮತ್ತೊಂದು ಕಡೆ ಪ್ರತಿ ಬಾರಿಯಂತೆ ನೆಟ್ಟಿಗರ ಆಕ್ರೋಶಕ್ಕೆ ಈ ಫೋಟೋ ಶೂಟ್ ಗುರಿಯಾಗಿತ್ತು. ಹಿಂದೂ ಸಂಸ್ಕೃತಿ, ಆಚಾರ-ವಿಚಾರಗಳನ್ನು ಲಘುವಾಗಿ ತೋರಿಸುವುದು ಹೆಚ್ಚಾಗುತ್ತಿದೆ. ಹೀಗಾಗಿ ಇಂತ ಪೋಟೋಶೂಟ್ ತಡೆಯಬೇಕು ಅನ್ನುವ ಒತ್ತಾಯ ಕೇಳಿ ಬಂದಿತ್ತು.
ಆದರೆ ಮದುವೆ ವಧುವಿನ ವಸ್ತ್ರ ಹಾಗೂ ಅಲಂಕಾರದಲ್ಲಿ ಯುವತಿಯೊರ್ವಳು ಸಿಗರೇಟ್, ಮದ್ಯ ಸೇವಿಸುತ್ತಿರುವ ಪೋಟೋ ಯಾವುದೇ ಮದುವೆಯ ಫೋಟೋ ಶೂಟ್ ಅಲ್ಲ. ಕೇರಳದ ಮಾಡೆಲ್ ರೇಷ್ಮಿ ನಡೆಸಿದ ಫೋಟೋ ಶೂಟ್ ಇದಾಗಿದೆ.

ಹಾಟ್ ಫೋಟೋ ಶೂಟ್ ಗಳಿಗಾಗಿ ಪ್ರಸಿದ್ಧಿಯಾಗಿರುವ ಈಕೆ ಪ್ರತೀ ಸಲವೂ ಇಂತಹುದೇ ಫೋಟೋಗಳನ್ನು ತೆಗೆದು ಸುದ್ದಿಯಲ್ಲಿರುತ್ತಾರೆ. ಉಳಿದವರ ಭಾವನೆಗಳನ್ನು ಕೆಣಕಿ ವೈರಲ್ ಆಗುವುದೇ ಇವರ ಉದ್ದೇಶವಾಗಿದೆ. ಜೊತೆಗೆ ಇವರು ಸಿಕ್ಕಾಪಪಟ್ಟೆ ‘ಎಡ’ದಲ್ಲಿರುವುದು ಇದಕ್ಕೆ ಕಾರಣ
ಹಾಗಂತ ಇವರು ಕೇವಲ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸುಮ್ಮನಿರುವುದಿಲ್ಲ. ಬದಲಾಗಿ 18 ವರ್ಷದ ಕಿರಿಯರಿಗೆ ಪ್ರವೇಶವಿಲ್ಲದ ಅನೇಕ ಸೈಟ್ ಗಳಲ್ಲಿ ಫೋಟೋ ಅಪ್ ಲೋಡ್ ಮಾಡ್ತಾರೆ.

ಅಲ್ಲಿ ರೇಷ್ಮಿ ಆರ್ ನಾಯರ್ ಅನ್ನುವ ಮಾಡೆಲ್ ಗೆ ಸಂಬಂಧಿಸಿದ ಹಾಟ್ ಫೋಟೋಗಳನ್ನು ನೋಡಬೇಕಾದರೆ ಹತ್ತು ಡಾಲರ್ ಹಣವನ್ನು ಪಾವತಿಸಬೇಕಾಗುತ್ತದೆ. ಅದು ದಿನಕ್ಕೆ, ತಿಂಗಳಿಗಾದ್ರೆ 300 ಡಾಲರ್. ಈ ಮೂಲಕ ಅವರು ಹಣವನ್ನೂ ಸಂಪಾದಿಸುತ್ತಾರೆ.
