Sunday, April 18, 2021

ಏಪ್ರಿಲ್ 10 ರಿಂದ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ – ನೈಟ್ ಕರ್ಫ್ಯೂ ಹಾಕಲು ಮೋದಿ ಬರಬೇಕಾಯ್ತು…

Must read

- Advertisement -
- Advertisement -

ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಅಬ್ಬರ ತೀವ್ರವಾಗತೊಡಗಿದೆ. ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ಸ್ಫೋಟ ಸಂಭವಿಸಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸೋಂಕಿನ ಎರಡನೆ ಅಲೆ ತಡೆಯುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಹಲವು ಕ್ರಮಗಳ ಕುರಿತಂತೆ ಸಲಹೆಗಳನ್ನು ನೀಡಿದರು.

ಕರ್ನಾಟಕ ಹೊರತು ಪಡಿಸಿ ದೇಶದ ಅನೇಕ ರಾಜ್ಯಗಳು ಈಗಾಗಲೇ ಮೋದಿಯವರು ನೀಡಿದ ಸಲಹೆಗಳನ್ನು ಈಗಾಗಲೇ ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕು ತಡೆ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳು ಜಾರಿಗೆ ಬರುತ್ತದೆ. ಆದರೆ ಕೆಲವೇ ಗಂಟೆಗಳಲ್ಲಿ ಅದು ತಿದ್ದುಪಡಿಯಾಗುತ್ತಿದೆ.ಕೊರೋನಾ ಮೊದಲ ಅಲೆಯ ಸಂದರ್ಭದಿಂದಲೂ ರಾಜ್ಯ ಸರ್ಕಾರದ್ದು ಬರೀ ಯಡವಟ್ಟಿನ ಆದೇಶವೇ ಸದ್ದು ಮಾಡಿದೆ.

ಈ ನಡುವೆ ಇಂದು ವಿವಿಧ ರಾಜ್ಯಗಳೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿಗಳು ನೈಟ್ ಕರ್ಫ್ಯೂ ಜಾರಿಗೊಳಿಸುವ ಕುರಿತಂತೆ ಸಲಹೆ ನೀಡಿದ್ದಾರೆ. ಲಾಕ್ ಡೌನ್ ಸಾಧ್ಯವೇ ಇಲ್ಲ ಎಂದು ಹೇಳಿದ ಪಿಎಂ, ನೈಟ್ ಕರ್ಫ್ಯೂ ಸೇರಿದಂತೆ ಇತರೆ ಕೆಲಸಗಳಿಗೆ ಒತ್ತು ನೀಡಿ ಸೋಂಕು ತಡೆಯುವಂತೆ ಹೇಳಿದ್ದಾರೆ. ಜೊತೆಗೆ ನೈಟ್ ಕರ್ಫ್ಯೂ ಅನ್ನು ಕೊರೋನಾ ಕರ್ಫ್ಯೂ ಅನ್ನಿ, ಜನ ಜಾಗೃತರಾಗುತ್ತಾರೆ ಅಂದಿದ್ದಾರೆ.

ಅತ್ತ ಪಿಎಂ ಕೊರೋನಾ ಕರ್ಫ್ಯೂ ಹೇರಿಕೆ ಬಗ್ಗೆ ಸಲಹೆ ನೀಡುತ್ತಿದ್ದಂತೆ, ರಾಜ್ಯ ಸರ್ಕಾರ ಎಪ್ರಿಲ್ 10 ರಿಂದ ಎಪ್ರಿಲ್ 20 ತನಕ 8 ನಗರಗಳಲ್ಲಿ ಕೊರೋನಾ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದೆ.

ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ತುಮಕೂರು ಉಡುಪಿ ಮಂಗಳೂರು ಬೆಂಗಳೂರು ಮೈಸೂರು ಬೀದರ್, ಕಲಬುರಗಿ ಹಾಗೂ ಮೈಸೂರಿನಲ್ಲಿ ಕೊರೋನಾ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದು ಕೇವಲ ನಗರ ಕೇಂದ್ರಗಳಿಗೆ ಅನ್ವಯಿಸುತ್ತದೆ ಹೊರತು ಇಡೀ ಜಿಲ್ಲೆಗೆ ಅನ್ಲಯಿಸುವುದಿಲ್ಲ.

ಕೊರೋನಾ ಕರ್ಫ್ಯೂ ಕಾರಣದಿಂದ ನೈಟ್ ಪಾರ್ಟಿ ಹೊಟೇಲ್ ಬಾರ್, ರೆಸ್ಟೋರೆಂಟ್, ಪಬ್ ಸಿನಿಮಾಗಳು ರಾತ್ರಿ 10 ಗಂಟೆಗೆ ಬಾಗಿಲು ಹಾಕಿಕೊಳ್ಳಬೇಕಾಗುತ್ತದೆ.

ಆದರೆ ಇದು ಕೂಡಾ ಮತ್ತೊಂದು ಯಡವಟ್ಟಿನ ಆದೇಶವಾಗಿದೆ. ಕೊರೋನಾ ಕರ್ಫ್ಯೂ ಅಥವಾ ನೈಟ್ ಕರ್ಫ್ಯೂ ಅನ್ನು ಕೇವಲ ನಗರ ಪ್ರದೇಶಗಳಿಗೆ ಸೀಮಿತಗೊಳಿಸಿರುವುದರಲ್ಲಿ ಅರ್ಥವೇ ಇಲ್ಲ. ನಿಜಕ್ಕೂ ಕೊರೋನಾ ತಡೆಯಬೇಕಾಗಿದ್ರೆ ಇಡೀ ಜಿಲ್ಲೆಗೆ ಈ ಆದೇಶ ಅನ್ವಯವಾಗಿರಬೇಕಿತ್ತು. ಈ ಆದೇಶದಿಂದ ನಗರದ ಪ್ರದೇಶ ಜನ ನಗರದಿಂದ ಹೊರಗೆ ಬಂದು ಎಂಜಾಯ್ ಮಾಡ್ತಾರೆ ಅಷ್ಟೇ.

- Advertisement -
- Advertisement -
- Advertisement -

Latest article