ವುಹಾನ್ ವೈರಸ್ ಕಾರಣದಿಂದ ಈಗಾಗಲೇ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಚಿತ್ರರಂಗದ ಕಥೆ ಕೇಳುವುದೇ ಬಡ. ದೊಡ್ಡ ದೊಡ್ಡ ನಿರ್ಮಾಪಕರ, ಸ್ಟಾರ್ ನಟರು ಹೇಗೋ ಬಚಾವ್ ಆಗುತ್ತಿದ್ದಾರೆ. ಫಾರ್ಮ್ ಹೌಸ್, ರಿಯಾಲಿಟಿ ಶೋ, ವ್ಯವಹಾರ ಎಂದು ಬಿಂದಾಸ್ ಆಗಿದ್ದಾರೆ. ಆದರೆ ಸಣ್ಣ ಪುಟ್ಟ ನಟ, ನಿರ್ಮಾಪಕರ ಪಾಡು ಹೇಳತೀರದು. ಜೊತೆಗೆ ತಾಂತ್ರಿಕ ವರ್ಗ, ಸಹ ಕಲಾವಿದರುಸ ಲೈಟ್ ಬಾಯ್ಸ್ ಹೀಗೆ ತೆರೆಯ ಹಿಂದೆ ದುಡಿಯುವವರ ಸಂಕಷ್ಟಗಳನ್ನು ಕೇಳುವವರೇ ಇಲ್ಲ.
ಈ ನಡುವೆ ಬಿಡುಗಡೆಗೆ ಸಿದ್ದವಾಗಿರುವ ಚಿತ್ರಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದರೆ ವ್ಯರ್ಥ ಎಂದು ಅರಿತಿರುವ ನಿರ್ಮಾಪಕರು ಒಟಿಟಿ ಬಾಗಿಲಲ್ಲಿ ನಿಂತಿದ್ದಾರೆ. ಹೀಗಾಗಿಯೇ ಅನೇಕ ಸಿನಿಮಾಗಳು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ.
ಈ ಪೈಕಿ ಇದೀಗ ಯಶ್ ನಟನೆಯ ಕೆಜಿಎಫ್ 2 ಚಿತ್ರಕ್ಕೂ ಕೊರೋನಾ ವೈರಸ್ ಕಂಟಕವಾಗಲಿದ್ದು, ಎರಡನೇ ಅಲೆಯ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಹೀಗಾಗಿ ಇದೀಗ ಅನೇಕ ಒಟಿಟಿ ಮಂದಿ ಕೆಜಿಎಫ್ ಖರೀದಿಗೆ ಮುಂದೆ ಬಂದಿದ್ದಾರೆ. ಜೊತಗೆ ದೊಡ್ಡ ಮೊತ್ತದ ಆಫರ್ ಕೂಡ ಕೊಟ್ಟಿದ್ದಾರೆ.
ಮಾಹಿತಿಗಳ ಪ್ರಕಾರ ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ರಿಲೀಸ್ ಮಾಡದೇ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಿದರೆ 255 ಕೋಟಿ ಕೊಡುವುದಾಗಿ ಒಟಿಟಿ ಪ್ಲಾಟ್ಫಾರ್ಮ್ ಬೇಡಿಕೆ ಇಟ್ಟಿದೆಯಂತೆ. ಆದರೆ ನಿರ್ಮಾಪಕರು ಈ ಆಫರ್ ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.
KGF2 ಚಿತ್ರ 5 ಭಾಷೆಗಳಲ್ಲಿ ತಯಾರಾಗಿದ್ದು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ ಗಳಿಕೆ 255 ಕೋಟಿ ರೂಪಾಯಿ ದಾಟುತ್ತದೆ. ಜೊತೆಗೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದರೆ ಅಭಿಮಾನಿಗಳ ಕೇಕೆ ಕುಣಿತ ನೋಡುವುದೇ ಹಬ್ಬ, ಜೊತೆಗೆ ಒಬ್ಬ ಸ್ಟಾರ್ ನಟನಿಗೆ ನಿಜವಾದ ಗೌರವ ಸಲ್ಲುವುದು ಇಲ್ಲೇ. ಒಟಿಟಿಯಲ್ಲಿ ಬಿಡುಗಡೆಯಾದರೆ ಈ ಸಂಭ್ರಮ ಎಲ್ಲಿರುತ್ತದೆ.
Discussion about this post