ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಬಾಂಧವ್ಯ ಇಂದು ನಿನ್ನೆಯದಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಮನ್ಸೂಲ್ ಅಲಿ ಖಾನ್ ಪಟೌಡಿ-ಶರ್ಮಿಳಾ ಠಾಗೋರ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಹೀಗೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಗಳ ಯಶಸ್ವಿ ಇನ್ನಿಂಗ್ಸ್‌ಗಳು ದಾಖಲಾಗಿವೆ.
ಇದೀಗ ಟೀಮ್ ಇಂಡಿಯಾದ ಪ್ರಧಾನ ಕೋಚ್ ರವಿ ಶಾಸ್ತ್ರಿ ತಮ್ಮ 56ನೇ ವಯಸ್ಸಲ್ಲಿ ಈ ಇನ್ನಿಂಗ್ಸ್‌ಗೆ ಹೊಸ ಸೇರ್ಪಡೆಯಾಗಲು ಹೊರಟಿರುವಂತಿದೆ.
ನಿಮ್ರತ್ ಕೌರ್ ಒನ್ ನೈಟ್ ವಿಥ್ ದಿ ಕಿಂಗ್, ಏರ್ ಲಿಫ್ಟ್ ಚಿತ್ರಗಳಲ್ಲಿ ನಟಿಸಿದ್ದು ಅಲ್ಲದೇ ಜಾಕಲೇಟ್ ಜಾಹೀರಾತಿನಲ್ಲಿ ನಟಿಸಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು.
ಇದೀಗ 36ರ ಹರೆಯದ ನಿಮ್ರತ್ ಕೌರ್ ರವಿಶಾಸ್ತ್ರಿ ಜೊತೆ ಕಳೆದ 2 ವರ್ಷಗಳಿಂದ ಗೌಪ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇನ್ನು ರವಿಶಾಸ್ತ್ರಿ ಜತೆಗಿನ ಡೇಟಿಂಗ್ ಸುದ್ದಿ ಕುರಿತಂತೆ ಪ್ರತಿಕ್ರಿಯಿಸಿರುವ ನಟಿ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಯಾರೊಂದಿಗೂ ಡೇಟಿಂಗ್ ನಡೆಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಪತ್ನಿ ರಿತು ಅವರಿಂದ ಶಾಸ್ತ್ರಿ ದೂರವಾಗಿ 10 ವರ್ಷಗಳೇ ಕಳೆದಿವೆ. 1990ರಲ್ಲೇ ಪತ್ನಿಯಿಂದ ದೂರವಾಗಿದ್ದ ರವಿಶಾಸ್ತ್ರಿ 30 ವರ್ಷದ ಹಿಂದೆ ನಟಿ ಅಮೃತ ಸಿಂಗ್ ಜತೆ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ನಂತರ ಅಮೃತಾ ಸಿಂಗ್, ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿದ್ದರು.
ಆದರೆ ಈ ಸುದ್ದಿಯನ್ನು ಅಲ್ಲಗಳೆದಿರುವ ರವಿಶಾಸ್ತ್ರಿ ಇದೊಂದು ‘ಲೋಡ್ ಗಟ್ಟಲೆ ಸೆಗಣಿ’ ಎಂದು ಟೀಕಿಸಿದ್ದಾರೆ.
Discussion about this post