ಟೋಕಿಯೋ : ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಭಾರತದ ರವಿಕುಮಾರ್ ದಹಿಯಾ ರಜತ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಫೈನಲ್ ನಲ್ಲಿ ರಷ್ಯಾದ ಜೌರ್ ಉಗೇವ್ ವಿರುದ್ಧ 4-7 ಅಂತರದಿಂದ ರವಿಕುಮಾರ್ ಸೋಲು ಅನುಭವಿಸಿದ್ದಾರೆ.
ಆರಂಭದಿಂದಲೂ ಉಗೇವ್ ಮೇಲುಗೈ ಹೊಂದಿದ್ದರು. ಆದರೆ ಕೊನೆಯ ಹಂತದಲ್ಲಿ ರವಿ ಎರಡು ಅಂಕ ಗಳಿಸುವಲ್ಲಿ ಯಶಸ್ವಿಯಾದರೂ ಅಷ್ಟರಲ್ಲಾಗಲೇ ಉಗೇವ್ ಸಾಕಷ್ಟು ಮುಂದಿದ್ದರು. ಈ ಮೂಲಕ ಸುಶೀಲ್ ಕುಮಾರ್ ಬಳಿಕ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ಎಂಬ ಗೌರವಕ್ಕೆ ರವಿಕುಮಾರ್ ಪಾತ್ರರಾಗಿದ್ದಾರೆ.
Discussion about this post