ಚಂದನ ವನದ ಚೆಂದದ ನಿರ್ದೇಶಕ ಓಂ ಪ್ರಕಾಶ್ ರಾವ್ ಮೇಲೆ ಇರುವ ಆರೋಪಗಳಿಗೆ ಲೆಕ್ಕವಿಲ್ಲ. ಆದರೆ ಕೆಲಸದ ಕಮಿಂಟ್ ಮೆಂಟ್ ಲೆಕ್ಕದಲ್ಲಿ ಅವರನ್ನು ಮೀರಿಸುವ ನಿರ್ದೇಶಕರು ಕೆಲವೇ ಕೆಲವರು ಮಾತ್ರ.
ಲಾಕಪ್ ಡೆತ್, ಸಿಂಹದ ಮರಿ, ಹುಚ್ಚ, AK47, ಹೀಗೆ ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ ಇವರದ್ದು. ಆದರೆ ಅದ್ಯಾವ ಚಿತ್ರಗಳನ್ನು ಪ್ರಾರಂಭಿಸಿದರೂ ನಿಗದಿತ ಅವಧಿಗೆಯಲ್ಲಿ ಮುಗಿಸಿದ ಇತಿಹಾಸ ಮಾತ್ರ ಇಲ್ಲ. ಓಂ ಪ್ರಕಾಶ್ ಕೈಗೆತ್ತಿಕೊಂಡ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಅನ್ನುವುದು ಅವರಿಗೆ ಗೊತ್ತಿರುವುದಿಲ್ಲ.
ಆದರೆ ಇದೀಗ ಮಲ್ಟಿ ಸ್ಟಾರ್ ಹಿಂದೆ ಬಿದ್ದಿರುವ ಓಂ ಪ್ರಕಾಶ್ ರವಿ ಚಂದ್ರ ಅನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರವಿಚಂದ್ರನ್ ಮತ್ತು ಉಪೇಂದ್ರ ಇಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಅಂದ ಹಾಗೇ ತನ್ನ ಮೇಲಿರುವ ಹಳೆಯ ಆರೋಪ ಹಾಗೂ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಮುಂದಿನ ಸಂಕ್ರಾತಿ ಹೊತ್ತಿಗೆ ರವಿ ಚಂದ್ರನನ್ನು ತೆರೆಗೆ ತರುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.
ಈ ಸಲುವಾಗಿ ಪಕ್ಕಾ ಪ್ಲಾನ್ ಮಾಡಿಕೊಂಡಿರುವ ಅವರು ಉಪೇಂದ್ರ ಅವರ ಹುಟ್ಟಿದ ಹಬ್ಬದ ದಿನವಾದ ಸಪ್ಟಂಬರ್ 18 ರಂದು ಒಂದು ಟೀಸರ್ ಹಾಗೂ ರವಿಚಂದ್ರನ್ ಬರ್ತ್ ಡೇ ನವೆಂಬರ್ 1 ರಂದು ಮತ್ತೊಂದು ಟೀಸರ್ ಬಿಡುಗಡೆಯಾಗಲಿದೆ.
ಇನ್ನು ಈ ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ದುಡ್ಡು ಹಾಕಿದ್ದು, ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. KGF ಚಿತ್ರಕ್ಕೆ ಸಂಭಾಷಣೆ ಬರೆದಿರುವ ಚಂದ್ರಮೌಳಿ ಇಲ್ಲೂ ಸಂಭಾಷಣೆ ಬರೆಯುತ್ತಿದ್ದಾರೆ.
ಸಾನ್ವಿ ಶ್ರೀವಾತ್ಸವ್, ನಿಮಿಕಾ ರತ್ನಾಕರ್, ಅವಿನಾಶ್ ,ಸಾಧು ಸೇರಿದಂತೆ ಅನೇಕರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.