ರಶ್ಮಿಕಾ ಮಂದಣ್ಣ ಯಾರಿಗೆ ಗೊತ್ತಿಲ್ಲ ಹೇಳಿ. ಕಿರಿಕ್ ಪಾರ್ಟಿಯಿಂದ ಹಿಡಿದು, ರಕ್ಷಿತ್ ಜೊತೆಗಿನ ಪ್ರೀತಿ, ಆಮೇಲೆ ಬ್ರೇಕಪ್ ಎಲ್ಲವೂ ಈಗ ಇತಿಹಾಸ.
ಇದಾದ ಬಳಿಕ ಆಕೆಯ ಬಾಳಿನಲ್ಲಿ ಅದೃಷ್ಟದ ಬಾಗಿಲು ತೆರೆದಿದ್ದು, ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ ರಶ್ಮಿಕಾಗೆ ಸಿಕ್ಕಿದ್ದೆ ಎಲ್ಲವೂ ಚಿನ್ನದಂತಹ ಅವಕಾಶ.
ಇದೀಗ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿರುವ ಈ ಬೆಡಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ‘ಗುಡ್ ಬೈ’ ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಕೂಡಾ ಭರದಿಂದ ಸಾಗಿದೆ.
ಈ ನಡುವೆ ಫಾದರ್ಸ್ ಡೇ ದಿನ ಶೂಟಿಂಗ್ ಸೆಟ್ ನಲ್ಲಿ ನಟಿಯರಾದ ರಶ್ಮಿಕಾ ಮತ್ತು ಎಲಿ ಅವ್ರಾಮ್ ಬಿಗ್ ಬಿ ಅಮಿತಾಬ್ ಗೆ ಕೇಕ್ ಮತ್ತು ಹೂ ಗುಚ್ಛ ನೀಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅಮಿತಾಬ್, “ಚಿತ್ರದ ನಿರ್ದೇಶಕರು ಮತ್ತು ಪಾತ್ರವರ್ಗ ಹಾಗೂ ಸಿಬ್ಬಂದಿಯೊಂದಿಗೆ ಹಳೆಯ ಸಮಯದ ನೆನಪು ತುಂಬಿದೆ. ತಂದೆಯ ದಿನವನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ ನನಗೆ ಕೇಕ್ ಮತ್ತು ಹೂ ಗುಚ್ಛವನ್ನು ಉಡುಗೊರೆಯಾಗಿ ನೀಡಲು ಒಟ್ಟಿಗೆ ಸೇರಿದ್ದಾರೆ” ಅಂದಿದ್ದಾರೆ.
Discussion about this post