ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ 1,200 ವರ್ಷ ಹಳೆಯ ದುರ್ಗಾ ಮಾತೆ ವಿಗ್ರಹ ಪತ್ತೆಯಾಗಿದ್ದು, ನಾಡಿನ ಗತ ವೈಭವವಕ್ಕೆ ಸಾಕ್ಷಿ ದೊರೆತಿದೆ. ಮಾತ್ರವಲ್ಲದ ಕಾಶ್ಮೀರ ಪುರವಾಸಿನಿ ಅನ್ನುವ ಸಾಲುಗಳನ್ನು ಟೀಕಿಸುವ ಮಂದಿಗೂ ಉತ್ತರ ಕೊಟ್ಟಿದೆ.
ಸ್ಥಳೀಯ ಕೂಲಿ ಕಾರ್ಮಿಕ ನದಿಯಿಂದ ಮರಳು ತೆಗೆಯುತ್ತಿದ್ದಾಗ ಈ ವಿಗ್ರಹ ಸಿಕ್ಕಿದ್ದು, ಕಪ್ಪು ಶಿಲೆಯಲ್ಲಿ ಕೆತ್ತಲಾಗಿರುವ ವಿಗ್ರಹದಲ್ಲಿ ನಾಲ್ವರು ಅಂಗರಕ್ಷಕರೊಂದಿಗೆ ಸಿಂಹಾಸನದಲ್ಲಿ ಕುಳಿತಿರುವ ದುರ್ಗೆಯನ್ನು ಕಾಣಬಹುದಾಗಿದೆ. ನದಿಯಲ್ಲಿ ಸಿಕ್ಕ ವಿಗ್ರಹವನ್ನು ಮಾರಾಟ ಮಾಡಲು ಚಾಲಕ ಪ್ರಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದರು.
ಇನ್ನು ಈ ಬಗ್ಗೆ ಮಾತನಾಡಿರುವ ಪುರಾತತ್ವ ಇಲಾಖೆಯ ಅಧಿಕಾರಿ ಮುಸ್ತಾಕ್ ಅಹ್ಮದ್ ಬೇಗ್ ಪರೀಕ್ಷೆಯ ಸಮಯದಲ್ಲಿ ದೇವಿ ದುರ್ಗೆಯ ವಿಗ್ರಹ 7-8 ನೇ ಶತಮಾನಕ್ಕೆ ಸೇರಿರುವುದೆಂದು ಗೊತ್ತಾಗಿದೆ ಅಂದಿದ್ದಾರೆ. ಇನ್ನು ವಿಗ್ರಹವನ್ನು ಕಪ್ಪು ಶಿಲೆಯಲ್ಲಿ ಕೆತ್ತಲಾಗಿದ್ದು, ಸ್ಥಳೀಯವಾಗಿ ಸಿಗುವ ಶಿಲೆಯಾಗಿದೆ ಅಂದಿದ್ದಾರೆ.
ಇದೀಗ ವಿಗ್ರಹವನ್ನು ಪೊಲೀಸರು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Discussion about this post