ಬೆಂಗಳೂರು : ಸಾಹುಕಾರ್ ಖ್ಯಾತಿಯ ರಮೇಶ್ ಜಾರಕಿಹೊಳಿ ಕಾಮಲೀಲೆ ಸಿಡಿ ಪ್ರಕರಣ ಕುರಿತಂತೆ ಇದೀಗ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ.
ಪೊಲೀಸ್ ತನಿಖೆಯೊಂದು ನಡೆಯದ ಹೊರತು ಸಿಡಿ ರಹಸ್ಯ ಬಯಲಾಗಲು ಸಾಧ್ಯವಿಲ್ಲ. ಹಾಗಿದ್ದರೂ ಇದೀಗ ರಮೇಶ್ ಜಾರಕಿಹೊಳಿ ಅವರನ್ನು ನಿರಪರಾಧಿಯಾಗಿ ಬಿಂಬಿಸುವ ಕೆಲಸ ನಡೆಯುತ್ತಿದೆ.
ಇದೊಂದು ಹನಿಟ್ರ್ಯಾಪ್ ಅನ್ನುವುದು ಒಂದು ವಾದವಾದರೆ, ಪರಸ್ಪರ ಒಪ್ಪಂದದಿಂದ ಆಗಿರುವ ಕ್ರಿಯೆ ಅನ್ನುವುದು ಮತ್ತೊಂದು ವಾದ.
ಇದೀಗ ಹೊಸದಾಗಿ ಹುಟ್ಟಿಕೊಂಡಿರುವುದು ಮಚ್ಚೆ ವಾದ.
ರಮೇಶ್ ಜಾರಕಿಹೊಳಿ ಕತ್ತಿನಲ್ಲಿ ಮಚ್ಚೆ ಇದೆ. ವಿಡಿಯೋದ ದೃಶ್ಯಗಳಲ್ಲಿ ಮಚ್ಚೆ ಇಲ್ಲದ ವ್ಯಕ್ತಿ ಇದ್ದಾರೆ. ಹೀಗಾಗಿ ಇದೊಂದು ಎಡಿಟ್ ಮಾಡಿರುವ ವಿಡಿಯೋ ಅನ್ನೋದು ಹೊಸ ವಾದ.
ಇದಕ್ಕೆ ಇದೀಗ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡಾ ದನಿಗೂಡಿಸಿದ್ದಾರೆ.

ಜಾರಕಿಹೊಳಿ ನಿವಾಸದ ಬಳಿ ಮಾತನಾಡಿದ ಅವರು ಜಾರಕಿಹೊಳಿ ದೇವರ ಮೇಲೆ ತುಂಬಾ ನಂಬಿ ಇಟ್ಟವರು, ಹೀಗಾಗಿ ಇದು ನಿಜನಾ ಸುಳ್ಳಾ ಎಂದು ಹೇಳಲಾಗುತ್ತಿಲ್ಲ.
ರಮೇಶ್ ಅವರೇ ಇದು ಫೇಕ್ ವಿಡಿಯೋ ಅಂದಿದ್ದಾರೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಜಾರಕಿಹೊಳಿ ಹೇಳಿದ್ದು ಸತ್ಯ ಅನ್ನಿಸುತ್ತಿದೆ. ವಿಡಿಯೋ ನೋಡಿದರೆ ಅದು ಎಡಿಟ್ ಆಗಿರುವಂತಿದೆ. ವಿಡಿಯೋದಲ್ಲಿ ಜಾರಕಿಹೊಳಿ ಕುತ್ತಿಗೆಯಲ್ಲಿರುವ ಮಚ್ಚೆ ಇಲ್ಲ ಅಂದಿದ್ದಾರೆ.
ಮಚ್ಚೆ ಇದೆಯೋ ಇಲ್ಲವೋ ಬೇರೆ ಪ್ರಶ್ನೆ. ವಿಡಿಯೋದಲ್ಲಿರುವುದು ರಮೇಶ್ ಜಾರಕಿಹೊಳಿ ಅಲ್ಲ ಅನ್ನುವುದಾದರೆ ಪ್ರಶ್ನೆ ಬೇರೆ.
ಈಗಿನ ಮಾತುಗಳ ಪ್ರಕಾರ ವಿಡಿಯೋದಲ್ಲಿರುವುದು ರಮೇಶ್ ಜಾರಕಿಹೊಳಿ ಅನ್ನುವುದು ಸ್ಪಷ್ಟ. ಅದರಲ್ಲಿರುವ ಆಡಿಯೋ, ಮಾತುಗಳನ್ನು ಗಮನಿಸಿದರೆ ಅದು ಬೆಳಗಾವಿಯ ಸಾಹುಕಾರ್ ಅನ್ನೋದು ಪಕ್ಕಾ.
ಇನ್ನು ಅದು ಅವರ ಖಾಸಗಿ ಜೀವನ ಅನ್ನುವ ವಾದಕ್ಕೆ ಬರುವುದಾದರೆ, ಜನಪ್ರತಿನಿಧಿ ಅನ್ನಿಸಿಕೊಂಡವರು ಕೂಡಾ ತಮ್ಮ ಖಾಸಗಿ ಬದುಕಿನಲ್ಲಿ ಒಂದಿಷ್ಟು ಘನತೆ ಗೌರವ ಕಾಪಾಡಿಕೊಳ್ಳಬೇಕು, ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಕನಿಷ್ಟ ಪಕ್ಷ ಮನೆಯವರಾಗಿದರೂ ನೈತಿಕತೆಯನ್ನು ಉಳಿಸಿಕೊಳ್ಳಬೇಕು.
ಅದನ್ನು ಬಿಟ್ಟು ಕರ್ನಾಟಕ ಭವನದಲ್ಲಿ ಕುಳಿತು ಮಾಡಬಾರದ್ದನ್ನು ಮಾಡಿದರೆ ಹೇಗೆ…?
Discussion about this post