ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ನ್ನು ಹತ್ತಿರುವ ಎಸ್ಐಟಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ.
ಆದರೆ ರಮೇಶ್ ಜಾರಕಿಹೊಳಿ ಸಿಡಿ ಆಸಲಿಯೋ, ನಕಲಿಯೋ ಅನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.
ಈ ನಡುವೆ ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ ನರೇಶ್ ಗೌಡನ ನಿವಾಸದ ಮೇಲೆ ಎಸ್ಐಟಿ ದಾಳಿ ನಡೆಸಿತ್ತು. ಈ ವೇಳೆ ದುಬಾರಿ ಮೊತ್ತದ ಲ್ಯಾಪ್ ಟಾಪ್ ಹಾಗೂ 18 ಲಕ್ಷ ರೂ ಮೌಲ್ಯದ ಚಿನ್ನಾಭರಣ ಖರೀದಿಯ ಬಿಲ್ ಗಳು ಪತ್ತೆಯಾಗಿದೆ.
ಮತ್ತೊಂದು ಕಡೆ ಸಿಡಿ ಲೇಡಿ ತಂಗಿದ್ದ ಗಂಗಾನಗರದ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 23 ಲಕ್ಷ ನಗದು ಸಿಕ್ಕಿದೆಯಂತೆ.
ಹೀಗಾಗಿ ಎಸ್ಐಟಿ ಅಧಿಕಾರಿಗಳು ಯುವತಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಅನ್ನುವುದರ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ರಾಜ್ಯ ಬಿಜೆಪಿ ಟ್ವೀಟರ್ ನಲ್ಲಿ ಡಿಕೆಶಿಯವರಿಗೆ ಟಾಂಗ್ ಕೊಡುವ ಕಾರ್ಯವನ್ನು ಮುಂದುವರಿಸಿದೆ. ನಿನ್ನೆ ನರೇಶ್ ಗೌಡ ಹಾಗೂ ಡಿಕೆ ಶಿವಕುಮಾರ್ ಜೊತೆಗಿದ್ದ ಫೋಟೋ ಟ್ವೀಟ್ ಮಾಡಿದ್ದ ಬಿಜೆಪಿ ಇಂದು ಮತ್ತೊಬ್ಬ ಕಿಂಗ್ ಪಿನ್ ಜೊತೆಗಿನ ಫೋಟೋ ಪ್ರಕಟಿಸಿದೆ.
Discussion about this post