ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪುರಾಣದ ಹಿಂದಿರುವ ಕಿಂಗ್ ಪಿನ್ ಗಳು ಎನ್ನಲಾದವರ ಹೆಸರು ಬಹಿರಂಗಗೊಂಡಿದೆ.
ಸುವರ್ಣ ವಾಹಿನಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಪ್ರಸಾರಮಾಡಿದೆ.
ಕಿಂಗ್ ಪಿನ್ 1 : ನರೇಶ್ ಗೌಡ ಪತ್ರಕರ್ತ, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭುವನಹಳ್ಳಿ ಈತ ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಅನ್ನು ಆರೋಪ ಎದುರಿಸುತ್ತಿದ್ದಾನೆ. ಆರೋಪವನ್ನು ಸಾಬೀತು ಮಾಡುವ ಹೊಣೆ ಎಸ್ಐಟಿಯದ್ದಾಗಿದೆ.
ಕಿಂಗ್ ಪಿನ್ 2 – ಶ್ರವಣ್, ಪತ್ರಕರ್ತ – ಹ್ಯಾಕಿಂಗ್ ಏಕ್ಸ್ ಪರ್ಟ್ ಆಗಿರುವ ಶ್ರವಣ್, ಸಿಡಿಯನ್ನು ಅಪ್ ಲೋಡ್ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾನೆ.

ಕಿಂಗ್ ಪಿನ್ 3 – ಭವಿತ್, ಪತ್ರಕರ್ತ -ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ದೋಣಗುಡಿಗೆ ಮೂಲದ ಭವಿತ್ ಕಾಮಲೀಲೆಯಯ ಸಿಡಿಗೆ ಸ್ಕ್ರಿಪ್ಟ್ ಹಾಗೂ ವಾಯ್ಸ್ ಕೊಟ್ಟ ಆರೋಪ ಎದುರಿಸುತ್ತಿದ್ದಾನೆ.
ಕಿಂಗ್ ಪಿನ್ 4 – ಆಕಾಶ್ ತಳವಾಡೆ, ಹವ್ಯಾಸಿ ಸಾಕ್ಷ್ಯಚಿತ್ರ ತಯಾರಕನಾಗಿರುವ ಆಕಾಶ್, ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದವನಾಗಿದ್ದು, ಸಿಡಿ ಲೇಡಿಯ ಸ್ನೇಹಿತ ಈತ ಎಂದು ಹೇಳಲಾಗಿದೆ.
ಕಿಂಗ್ ಪಿನ್ 5 – ಲಕ್ಷ್ಮಿಪತಿ, ಪತ್ರಕರ್ತ – ದೊಡ್ಡಬಳ್ಳಾಪುರ ಮೂಲದವನಾದ ಲಕ್ಷ್ಮಿಪತಿ, ದಿನೇಶ್ ಕಲ್ಲಹಳ್ಳಿಗೆ ಸಿಡಿ ಹಸ್ತಾಂತರಿಸಿದ ಆರೋಪ ಎದುರಿಸುತ್ತಿದ್ದಾನೆ
ಕಿಂಗ್ ಪಿನ್ 6 – ಸಾಗರ್, ಸೈಬರ್ ಕೆಫೆ ಉದ್ಯೋಗಿಯಾಗಿರುವ ಈತ ಮೆಕ್ಯಾನಿಕಲ್ ಇಂಜಿನಿಯರ್ ಕೂಡಾ ಹೌದು. ಬೀದರ್ ಜಿಲ್ಲೆ ಜೌರಾದ್ ನ ಕುಸನೂರು ಗ್ರಾಮದ ಈತ ಆಕಾಶ್ ತಳವಾಡೆ ಸ್ನೇಹಿತನಾಗಿದ್ದಾನೆ. ಸಿಡಿ ಆಪ್ ಲೋಡ್ ಬಗ್ಗೆ ಮಾಹಿತಿ ನೀಡಿದ ಆರೋಪ ಈತನ ಮೇಲಿದೆ.
ಕಿಂಗ್ ಪಿನ್ 7 – ರಾಮನಗರ ಮೂಲದ ಶಿಕ್ಷಕಿ , ದಿನೇಶ್ ಕಲ್ಲಹಳ್ಳಿಗೆ ಸಿಡಿ ನೀಡುವ ವೇಳೆ ಉಪಸ್ಥಿತಿ ಇದ್ದಳು ಅನ್ನುವುದೇ ಆರೋಪ.
Discussion about this post