Thursday, March 4, 2021

ಮಾಡಿದುಣ್ಣೋ ಮಾರಾಯ…ಆತುರಗೆಟ್ಟು ಟ್ವೀಟ್ ಮಾಡಿದ್ದ ರಾಜ್ ದೀಪ್ ಸರ್ದೇಸಾಯಿ ಇಂಡಿಯಾ ಟುಡೇಯಿಂದ ಜೌಟ್….?

Must read

- Advertisement -
- Advertisement -

ನವದೆಹಲಿ : ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ಚಳುವಳಿಯಲ್ಲಿ, ರೈತನೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ಹಸಿ ಹಸಿ ಸುಳ್ಳು ಟ್ವೀಟ್ ಮಾಡಿದ್ದ ಪತ್ರಕರ್ತ, ಇಂಡಿಯಾ ಟುಡೇ ಕನ್ಸಲ್ಟಿಂಗ್ ಸಂಪಾದಕ ರಾಜ್ ದೀಪ್ ಸರ್ದೇಸಾಯಿ ಇಂಡಿಯಾ ಟುಡೇ ಗ್ರೂಪ್ ತೊರೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇಂಡಿಯಾ ಟುಡೇಯಾಗಲಿ, ರಾಜ್ ದೀಪ್ ಆಗ್ಲಿ ಏನೂ ಹೇಳಿಲ್ಲ.

ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ಚಳುವಳಿ ದಿನ ಟ್ವೀಟ್ ಮಾಡಿದ್ದ ರಾಜ್ ದೀಪ್ 45 ವರ್ಷದ ನವ್​ನೀತ್ ಎಂಬ ರೈತನೊಬ್ಬ, ಐಟಿಒ ಬಳಿ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ. ಈ ಬಲಿದಾನ ವ್ಯರ್ಥವಾಗಲು ರೈತರು ಬಿಡುವುದಿಲ್ಲ ಅನ್ನುತ್ತಿದ್ದಾರೆ.

ಮಾತ್ರವಲ್ಲದೆ ಈ ಬಗ್ಗೆ ವರದಿಗಾರಿಕೆ ಮಾಡೋ ಸಂದರ್ಭದಲ್ಲಿ ನವ್​ನೀತ್ ಸಿಂಗ್, ರೈತ ಚಳುವಳಿಯ ಗುರುತಾಗಿ ಉಳಿಯುತ್ತಾರೆ ಮತ್ತು ನವ್​ನೀತ್​ಗೆ ನ್ಯಾಯ ಸಿಗುವವರೆಗೂ ರೈತರು ಜಾಗ ಬಿಟ್ಟು ಕದಲೋದಿಲ್ಲ ಎಂದು ಮಸಾಲೆ ಬೇರೆ ಸೇರಿಸಿದ್ದರು.

ಇದಾದ ನಂತರ ದೆಹಲಿ ಪೊಲೀಸರು ವಿಡಿಯೋ ಒಂದನ್ನು ಬಿಡುಗಡೆ ಮಾಡಿ. ನವ್​ನೀತ್  ಸಾವಿಗೆ ಟ್ರ್ಯಾಕ್ಟರ್ ದುರಂತವೇ ಕಾರಣ ಅಂದಿದ್ದರು.

ಯಾವಾಗ ತನ್ನ ಸುಳ್ಳು ಬಯಲಾಯ್ತೋ ಹಳೆಯ ಟ್ವೀಟ್ ಡಿಲೀಟ್ ಮಾಡಿದ್ದ ಸರ್ದೇಸಾಯಿ ಹಳೆಯ ಟ್ವೀಟ್  ಡಿಲೀಟ್ ಮಾಡಿದರು.

ನಂತ್ರ  ಟ್ರಾಕ್ಟರ್ ಮಗುಚಿ ರೈತ ಮೃತಪಟ್ಟಿದ್ದಾನೆ ಎಂದು ಸೂಚಿಸುವ ವೀಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು, ಚಳುವಳಿಗಾರರು ರೈತ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಅನ್ನುತ್ತಿದ್ದಾರೆ ಪೊಲೀಸರು ಬ್ಯಾರಿಕೇಡ್​ಗಳನ್ನು ಉರುಳಿಸಲು ಹೊರಟಾಗ, ಟ್ರಾಕ್ಟರ್ ಮಗುಚಿ ಬಿದ್ದು ನವ್​ನೀತ್ ಮೃತಪಟ್ಟಿದ್ದಾರೆ ಅನ್ನುತ್ತಿದ್ದಾರೆ ಅಂದಿದ್ದರು.

ಆದರೆ ಅಷ್ಟು ಹೊತ್ತಿಗೆ ಜವಬ್ದಾರಿಯುತ್ತ ಪತ್ರಕರ್ತ ನಡೆದುಕೊಂಡ ರೀತಿಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇಂಡಿಯಾ ಟುಡೇಯಿಂದ ರಾಜ್ ದೀಪ್ ಅವರನ್ನು ವಜಾಗೊಳಿಸುವಂತೆ ಆಗ್ರಹ ಕೇಳಿ ಬಂದಿತ್ತು.

ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಚಾನೆಲ್ ಆಡಳಿತ ಮಂಡಳಿ ಎರಡು ವಾರಗಳ ಕಾಲ ವಾಹಿನಿಯ ಸ್ಕ್ರೀನ್ ಮೇಲೆ ಬಾರದಂತೆ ನಿರ್ಬಂಧ ಹಾಗೂ ಒಂದು ತಿಂಗಳ ಸಂಬಳವನ್ನು ಕಡಿತಗೊಳಿಸಿ ಆದೇಶಿಸಿದೆ.

ಚಾನೆಲ್ ಮುಖ್ಯಸ್ಥನಾದವನಿಗೆ ಈ ರೀತಿಯ ಪರಿಸ್ಥಿತಿ ಬಂದ್ರೆ ಅದಕ್ಕಿಂತ ದೊಡ್ಡ ಮುಜುಗರ ಮತ್ತೊಂದಿಲ್ಲ.

ಹೀಗಾಗಿ ಆಗಿರುವ ಅವಮಾನ ತಾಳಲಾರದೆ ರಾಜ್ ದೀಪ್ ವಾಹಿನಿ ತೊರೆದಿದ್ದಾರೆ ಅನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

- Advertisement -
- Advertisement -
- Advertisement -

Latest article