ಜೆಡಿಎಸ್ ಸಾರಥಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹೆಚ್. ವಿಶ್ವನಾಥ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದರೂ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನೇ ಟೀಕಿಸಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಪ್ಪಿಕೊಂಡ ರೀತಿ ಬಾಲಿಶವಾಗಿತ್ತು ಅನ್ನುವ ಮೂಲಕ ಕಾಂಗ್ರೆಸ್ ನಾಯಕರ ಕೈಗೆ ಅಸ್ತ್ರವೊಂದನ್ನು ಕೊಟ್ಟಿದ್ದಾರೆ.
ಇದನ್ನೂ ನೋಡಿ : ಎಷ್ಟು ದಿನ ಇರುತ್ತೀಯಾ, ನಾನು ನೋಡ್ತೀನಿ – ಸಿದ್ದರಾಮಯ್ಯಗೆ ದೇವೇಗೌಡರ ಅವಾಜ್
ಇನ್ನು ತನ್ನ ಮಾತುಗಳನ್ನು ಮುಂದುವರಿಸಿರುವ ವಿಶ್ವನಾಥ್ ಇದು ಕೇವಲ ನನ್ನ ಮಾತಲ್ಲ. ಪ್ರತೀಯೊಬ್ಬರೂ ಹೇಳುತ್ತಿದ್ದಾರೆ. ಇಡೀ ದೇಶವೇ ಹೇಳುತ್ತಿದೆ ಎಂದಿದ್ದಾರೆ. ಈ ಮಾತು ಕಿಡಿ ಹೊತ್ತುವಂತೆ ಮಾಡಿದೆ.
ವಿಶ್ವನಾಥ್ ಈ ಹಿಂದೆಯೂ ನೇರ ನಡೆ ನುಡಿಯಿಂದ ಮಾತನಾಡಿದವರು. ತನಗೆ ಇಷ್ಟವಾಗದಿದ್ದರೆ ಮುಲಾಜು ಇಟ್ಟುಕೊಂಡವರಲ್ಲ. ಆದರೆ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ವಿಶ್ವನಾಥ್ ಮಾತಿಗೆ ಬ್ರೇಕ್ ಹಾಕಬೇಕಾಗಿತ್ತು. ಆದರೆ ಅದು ವಿಶ್ವನಾಥ್ ಅವರಿಂದ ಸಾಧ್ಯವಿಲ್ಲ.
ಇದನ್ನೂ ನೋಡಿ :HD Kumaraswamy slams Siddaramaiah
ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರುವ ಹಳ್ಳಿ ಹಕ್ಕಿ ಇದೀಗ ರಾಹುಲ್ ಕಡೆ ನೋಡಿದೆ ಅಂದರೆ ಏನರ್ಥ. ನಾಳೆ ವಿವಾದ ಕಿಡಿ ಹೊತ್ತಿ ಉರಿದರೂ ಅದು ವಿಶ್ವನಾಥ್ ಅವರ ವೈಯುಕ್ತಿಕ ಅಭಿಪ್ರಾಯ ಎಂದು ತೇಪೆ ಸಾರುವ ಸಾಧ್ಯತೆಗಳಿದೆ.