ಬೆಂಗಳೂರು : ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಕುಂಬಳಗೋಡು ಸಮೀಪದ ನಿತ್ಯಾನಂದ ನಗರದ ಬಿಜಿಎಸ್ ನಾಲೆಜ್ ಸಿಟಿಯಲ್ಲಿ ನಿರ್ಮಿಸಲಾದ ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣವನ್ನು ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಉದ್ಘಾಟಿಸಿದರು.
ಇದೇ ವೇಳೆ ಬಿಜಿಎಸ್ ಅಂತರರಾಷ್ಟ್ರೀಯ ಅಕಾಡೆಮಿ ಶಾಲೆಯ ಕಟ್ಟಡವನ್ನು ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಿತ್ರನಟ ಕಿಚ್ಚ ಸುದೀಪ್, ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಇಲ್ಲಿಂದ ಹೆಚ್ಚು ಹೆಚ್ಚು ಕ್ರಿಕೆಟ್ ಪ್ರತಿಭೆಗಳು ಹೊರ ಬರುವಂತಾಗಲಿ.ಕ್ರಿಕೆಟ್ ಪಂದ್ಯಗಳು ಈ ಮೈದಾನದಲ್ಲಿ ಆಯೋಜನೆಯಾಗಲಿ.

ಮುಂದಿನ ದಿನಗಳಲ್ಲಿ ನಾನೂ ಮತ್ತು ರಾಹುಲ್ ದ್ರಾವಿಡ್ ಈ ಕ್ರೀಡಾಂಗಣಕ್ಕೆ ಬಂದು ಆಡುವಂತಾಗಲಿ ಎಂದು ಹಾರೈಸಿದರು.

Discussion about this post