Monday, April 19, 2021

ರಾಧಿಕಾ ಧರಿಸಿದ ಮೊದಲ ಚಿನ್ನದೊಡವೆ ಕೊಟ್ಟವರಾರು..?

Must read

- Advertisement -
- Advertisement -

ಜ್ಯುವೆಲ್ಸ್ ಆಫ್ ಇಂಡಿಯಾ ಪ್ರಸಿದ್ಧ ಆಭರಣ ಮೇಳದ ಈ ವರ್ಷದ ರಾಯಭಾರಿಯಾಗಿ ರಾಧಿಕಾ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಫೋಟೋಶೂಟ್ ಕೂಡಾ ಮಾಡಿಸಿಕೊಂಡಿರುವ ಅವರು ಚೆಂದದ ಸೀರೆ, ಚಿನ್ನ, ಅಮೂಲ್ಯ ಹರಳುಗಳ ಹಾಗೂ ಡೈಮಂಡ್ ಆಭರಣಗಳನ್ನು ತೊಟ್ಟು ಕಂಗೊಳಿಸಿದ್ದಾರೆ.

ಇನ್ನು ರಾಯಭಾರಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಧಿಕಾ ಜ್ಯುವೆಲ್ಸ್ ಆಫ್ ಇಂಡಿಯಾದ ಪ್ರತಿ ವರ್ಷದ ಆಭರಣ ಮೇಳದ ಹೋರ್ಡಿಂಗ್ಸ್ ನೋಡಿ ತಾನೂ ಒಂದು ಆಭರಣ ಮಳಿಗೆಗೆ ರಾಯಭಾರಿಯಾಗಬೇಕು ಅಂದುಕೊಳ್ಳುತ್ತಿದ್ದೆ. ಆದರೆ ಈಗ ಆಭರಣ ಮಳಿಗೆಯ ಬದಲು ಜ್ಯುವೆಲ್ಸ್ ಆಫ್ ಇಂಡಿಯಾದ ರಾಯಭಾರಿಯಾಗುವ ಅವಕಾಶ ಬಂದಿರುವುದು ಖುಷಿ ತಂದಿದೆ ಎಂದಿದ್ದಾರೆ.

ಮೊದಲು ಜ್ಯುವೆಲ್ಸ್ ಆಫ್ ಇಂಡಿಯಾದವರು ಕರೆ ಮಾಡಿ ರಾಯಭಾರಿಯಾಗಬೇಕು ಅಂದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಬಳಿಕ ಅವರೇ ಬಂದು ವಿಷಯ ತಿಳಿಸಿದಾಗ ಖುಷಿಯಾಯ್ತು, ದೀಪಿಕಾ ಪಡುಕೋಣೆ, ಪ್ರಿಯಾಮಣಿ,ರಚಿತಾ ರಾಮ್ ಇವರೆಲ್ಲರೂ ಈಗಾಗಲೇ ರಾಯಭಾರಿಯಾಗಿದ್ದಾರೆ, ಈಗ ನನ್ನ ಸರದಿ ಎಂದು ಸರ ಸರಿ ಮಾಡಿಕೊಂಡು ಹರ್ಷ ವ್ಯಕ್ತಪಡಿಸಿದರು ರಾಧಿಕಾ.

ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ರಾಧಿಕಾ, ನಾನು ಚಿಕ್ಕವಳಿದ್ದಾಗ, ಅಜ್ಜಿ ಪುಟ್ಟ ಕಿವಿಯೋಲೆ ಉಡುಗೊರೆಯಾಗಿ ಕೊಟ್ಟಿದ್ದರು. ಅದುವೇ ನಾನು ಧರಿಸಿದ ಮೊದಲ ಚಿನ್ನದೊಡವೆ, ಈಗ್ಲೂ ಅದನ್ನು ನಾನು ಜೋಪಾನವಾಗಿಟ್ಟುಕೊಂಡಿದ್ದೇನೆ, ಕೆಲವೊಮ್ಮೆ ಅದನ್ನು ಧರಿಸಿ ಸಂಭ್ರಮಿಸುತ್ತೇನೆ ಎಂದರು.

- Advertisement -
- Advertisement -
- Advertisement -

Latest article