Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಲೀಕ್ ಆಯ್ತು ದಮಯಂತಿಯ ಸ್ಟೋರಿ…!

Radhakrishna Anegundi by Radhakrishna Anegundi
November 14, 2019
in ಗಾಂಧಿ ಕ್ಲಾಸ್
Share on FacebookShare on TwitterWhatsAppTelegram

ರಾಧಿಕಾ ಕುಮಾರಸ್ವಾಮಿಯ ಬಹು ನಿರೀಕ್ಷಿತ ದಮಯಂತಿ ಟ್ರೈಲರ್ ರಿಲೀಸ್​, ಬಹಳ ದಿನಗಳ ನಂತರ ತೆರೆಯ ಮೇಲೆ ಅಬ್ಬರಿಸಿದ ರಾಧಿಕಾ

ಫ್ಯಾಂಟಸಿ ಕಥಾಹಂದರದ ದಮಯಂತಿ ಟ್ರೈಲರ್​ ಬಿಡುಗಡೆ, ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದಿರುವ ರಾಧಿಕಾ ಕುಮಾರಸ್ವಾಮಿ

ಬಹಳ ದಿನಗಳ ನಂತರ ನಟಿ ರಾಧಿಕಾ ಮತ್ತೆ ಬಣ್ಣ ಹಚ್ಚಿದ್ದು ಭಿನ್ನ ಅವತಾರದಲ್ಲಿ ಕಾಣಿಸಿದ್ದಾರೆ.
ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಿರುವ ಚಿತ್ರ ದಮಯಂತಿ ಟ್ರೈಲರ್​ ಲಹರಿ ಯೂಟ್ಯೂಬ್​ ಚಾನೆಲ್​ ನಲ್ಲಿ ಮಂಗಳವಾರ, ನ.12 ರ ಸಂಜೆ 6 ಗಂಟೆಗೆ ಬಿಡುಗಡೆಯಾಗಿದೆ.

ದಶಕದ ಹಿಂದೆ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ರಾಧಿಕಾ ಈಗ ದಮಯಂತಿ ಮೂಲಕ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್​ ನಲ್ಲಿ ಏನಿದೆ?

ಚಿತ್ರದ ಟ್ರೈಲರ್​ ನಲ್ಲಿ ರಾಧಿಕಾ ಗ್ಲಾಮರಸ್​ ಲುಕ್​ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಶತಮಾನದ ಹಿಂದಿನ ಮಹಾರಾಣಿಯಾಗಿಯೂ ಅಬ್ಬರಿಸಿದ್ದಾರೆ. ರಾಜನ ಮಗಳಾದ ರಾಧಿಕಾ ಆತನ ನಿಧನದ ನಂತರ ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥಾನಕ ಒಳಗೊಂಡಿದೆ. ಟ್ರೈಲರ್​ ನಲ್ಲಿ ರಾಧಿಕಾ ಪ್ರಾರಂಭದಲ್ಲಿ ಮಹಾರಾಣಿಯಾಗಿ ಕಾರಿನಿಂದ ಇಳಿಯುತ್ತಾಳೆ. ನಂತರದ ದೃಶ್ಯಗಳಲ್ಲಿ ಫ್ಯಾಂಟಸಿಯ ಅಂಶಗಳಿವೆ. ಮಹಾರಾಣಿ ನಿಧನದ ನಂತರ ಆಕೆ ಆತ್ಮವಾಗುತ್ತಾಳೆ. ಆತ್ಮವಾಗಿ ರಾಧಿಕಾ ರಾಣಿಯ ಪೋಷಾಕಿನಲ್ಲಿ ಅಬ್ಬರಿಸುತ್ತಾರೆ. ಆಕೆಯನ್ನು ಬಂಧಿಸುವ ಪ್ರಯತ್ನಗಳನ್ನೂ ಟ್ರೈಲರ್​ ನಲ್ಲಿ ಕಾಣಬಹುದು. ಟ್ರೈಲರ್​ ನೋಡಿದರೆ ಚಿತ್ರ ಅರುಂಧತಿ ಕಥೆಯನ್ನು ಹೋಲುತ್ತದೆ ಎಂಬ ಅನುಮಾನ ಬರುತ್ತದೆ. ಒಟ್ಟಿನಲ್ಲಿ ರಾಧಿಕಾ ಹೊಸ ಪಾತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

Damayanthi 01
ಲೀಕ್ ಆಯ್ತು ದಮಯಂತಿಯ ಸ್ಟೋರಿ...! 1

ಟ್ರೈಲರ್​ ನಲ್ಲಿ ಆಧುನಿಕ ಯುವತಿ ಮತ್ತು ರಾಣಿಯಾಗಿ ರಾಧಿಕಾ ಗಮನ ಸೆಳೆದಿದ್ದಾರೆ. ಚಿತ್ರದ ಮೂಲಕ ರಾಧಿಕಾ ಮತ್ತೊಂದು ಇನ್ನಿಂಗ್ಸ್​ ಆರಂಭಿಸಬಹುದು ಎಂದು ಹೇಳಲಾಗುತ್ತಿದೆ. ರಾಧಿಕಾರ ಈ ಪ್ರಯತ್ನವನ್ನು ಪ್ರೇಕ್ಷಕ ಎಷ್ಟರ ಮಟ್ಟಿಗೆ ಸ್ವೀಕರಿಸಲಿದ್ದಾರೆ ಎಂದು ನೋಡಬೇಕಿದೆ.

ಚಿತ್ರದ ಮಲಯಾಳಂ ಆವೃತ್ತಿಯ ಪೋಸ್ಟರ್​ ಗುರುವಾರ, ಅ.17 ರಂದು ಬಿಡುಗಡೆಯಾಗಿತ್ತು. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ ಲಾಲ್​ ಪೋಸ್ಟರ್​ ಬಿಡುಗಡೆಗೊಳಿಸಿದ್ದರು.

ಅ.7 ರಂದು ನಟಿ ರಾಧಿಕಾರ ದಮಯಂತಿ ಚಿತ್ರದ 2 ನೇ ಲುಕ್​ ಬಿಡುಗಡೆಯಾಗಿತ್ತು. ದಸರಾ ಹಿನ್ನೆಲೆಯಲ್ಲಿ ಚಿತ್ರದ ಸೆಕೆಡ್ ಲುಕ್ ನ್ನು ರಿಲೀಸ್ ಮಾಡಲಾಗಿತ್ತು, ಚಿತ್ರದ ಟೀಸರ್​ ನ ಕನ್ನಡ ಆವೃತ್ತಿ ಸೆ.20 ರಂದು ಬಿಡುಗಡೆಯಾಗಿತ್ತು.

ಅರಮನೆಯೊಂದರಲ್ಲಿ ರಾತ್ರಿಯ ವೇಳೆ ಕೆಂಪು ಸೀರೆಯನ್ನು ಧರಿಸಿದ ರಾಣಿಯ ಅವತಾರದಲ್ಲಿ ಕಾಣುವ ರಾಧಿಕಾ ಸಿಂಹಾಸನದ ಮೇಲೆ ಕುಳಿತುಕೊಂಡು ಗಂಭೀರ ನೋಟ ಬೀರುವುದನ್ನು ಟೀಸರ್​ ನಲ್ಲಿ ತೋರಿಸಲಾಗಿತ್ತು.

ಚಿತ್ರದಲ್ಲಿ ರಾಧಿಕಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಭಜರಂಗಿ ಖ್ಯಾತಿಯ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ಮಜಾ ಟಾಕೀಸ್​ ನ ಪವನ್​ ಮತ್ತು ಇತರರನ್ನು ಒಳಗೊಂಡಿದೆ.

ಚಿತ್ರವನ್ನು ನವರಸನ್​ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಶ್ರೀ ಲಕ್ಷ್ಮಿ ವೃಶಾದ್ರಿ ಪ್ರೊಡೊಕ್ಷನ್​ ಸಂಸ್ಥೆ ನಿರ್ಮಾಣ ಮಾಡಿದೆ. ಆರ್​ ಎಸ್​ ಗಣೇಶ್​ ನಾರಾಯಣ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಿ ಕೆ ಎಚ್​ ದಾಸ್​ ಅವರ ಕ್ಯಾಮರಾ ಕೈಚಳಕ ಇದೆ.

ದಮಯಂತಿ ಭಯಾನಕ, ಕುತೂಹಲಕಾರಿ ಮತ್ತು ಹಾಸ್ಯ ಭರಿತ ಚಿತ್ರವಾಗಿದೆ. ಇದು 80 ರ ದಶಕದ ಚಿತ್ರವಾಗಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ರಾಧಿಕಾ ಕುಮಾರಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ತನ್ನ ತಂದೆಯ ನಂತರದಲ್ಲಿ ಮಗಳು ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥೆಯನ್ನು ಚಿತ್ರ ಒಳಗೊಂಡಿದೆ. ದಮಯಂತಿ ಟ್ರೈಲರ್​ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ವಿಸಿದೆ. ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಬಿಡುಗಡೆಯಾಗಲಿದೆ.

Tags: ದಮಯಂತಿRadhika Kumaraswamy
ShareTweetSendShare

Discussion about this post

Related News

Kantara Box Office 300 crore Kantara Box Office 300 crore

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

dhruva-sarja-and-prerana-expecting-their-first-child

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Darshan NikitaThukral: ದರ್ಶನ್ ಮತ್ತು ನನ್ನ ಸಂಬಂಧ ಹಾಳು ಮಾಡಿದ್ದು ನಿಖಿತಾ : ಓಂಪ್ರಕಾಶ್ ರಾವ್ ಸ್ಫೋಟಕ ಹೇಳಿಕೆ

Malashree daughter Radhana Ram :ದರ್ಶನ್ ಗೆ ನಾಯಕಿಯಾಗಲು ಹೆಸರು ಬದಲಾಯಿಸಿಕೊಂಡ ಮಾಲಾಶ್ರೀ ಮಗಳು

Gaalipata2 : ಗಾಳಿಪಟ 2 ವಿತರಿಸುವ ಹಕ್ಕು ಪಡೆದ ಕೆವಿಎನ್ ಸಂಸ್ಥೆ

biggboss shashi : ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಮನೆಯ ಮಾರ್ಡನ್ ರೈತ ಶಶಿಕುಮಾರ್

vikranth rona :13 ವರ್ಷಗಳ ಬಳಿಕ ದೆಹಲಿಗೆ ಭೇಟಿ : ವಿಕ್ರಾಂತ್ ರೋಣ ಬಿಡುಗಡೆಗೂ ಮುನ್ನ ಬಿಜೆಪಿ ಸಚಿವರ ಮನೆಗೆ ದೌಡು

ಶಿರಡಿಯಲ್ಲಿ ಶರ್ಮಿಳಾ ಮಾಂಡ್ರೆ : ಗುರುವಾರ ಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ

ಚಂದನವನದ ವಜ್ರೇಶ್ವರಿಯಾಗ್ತಾರ ಅಶ್ವಿನಿ : ಅತ್ತೆಯ ಫೋಟೋದೊಂದಿಗೆ ಸೊಸೆ

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್