ಜುಲೈ 30 ರಂದು ʻರಾಧೆ ಶ್ಯಾಮ್ʼ ಥಿಯೇಟರ್‌ಗಳಿಗೆ ಲಗ್ಗೆ
ಪ್ರಭಾಸ್-ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʻರಾಧೆ ಶ್ಯಾಮ್ʼ ಇದೇ 2021 ರ ಜುಲೈ 30 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಪೋಸ್ಟರ್‌ನಿಂದಲೇ ಭಾರಿ ಸದ್ದು ಮಾಡಿದ್ದ ʻರಾಧೆ ಶ್ಯಾಮ್ʼ ಚಿತ್ರದ ಟೀಸರ್ ಅನ್ನು ವ್ಯಾಲಂಟೈನ್ಸ್ ಡೇ ಪ್ರಯುಕ್ತ ಚಿತ್ರ ತಂಡ UV Creations You tube Channelನಲ್ಲಿ ಇಂದು ಬಿಡುಗಡೆ ಮಾಡಿದೆ.

ರೋಮ್‌ನ ಅತ್ಯಂತ ರಮಣೀಯ ಸ್ಥಳಗಳ ದೃಶ್ಯಗಳೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ರೊಮೇನಿಯನ್ ರೈಲ್ವೆ ನಿಲ್ದಾಣದಲ್ಲಿ ಜನಸಮೂಹದ ನಡುವೆ ಪ್ರಭಾಸ್ – ಪೂಜಾ ಹೆಗ್ಡೆಯನ್ನ ಹುಡುಕುತ್ತಾ ಇಟಾಲಿಯನ್ ಭಾಷೆಯಲ್ಲಿ ‘Sei Un Angelo? Devo Morire per incontrarti? ಎಂದು ಕರೆಯುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ. ಆ ನಂತರ ಇಬ್ಬರ ನಡುವಿನ ಪ್ರೀತಿಯ ಸಂಭಾಷಣೆಯೇ ಟೀಸರ್ ಹೈಲೈಟ್.
ಸದಾ ಆಕರ್ಷಕವಾಗಿರುವ ರೋಮ್ ಪಟ್ಟಣ ಮತ್ತು ಅಲ್ಲಿನ ಅರಣ್ಯದ ಸುಂದರ ಪ್ರದೇಶಗಳಲ್ಲಿ ʻರಾಧೆ ಶ್ಯಾಮ್ʼ ಚಿತ್ರೀಕರಣಗೊಂಡಿದ್ದು, ಚಿತ್ರರಸಿಕರಿಗೆ ರಸದೌತಣ ನೀಡಲಿದೆ. ಇದರ ಝಲಕ್‌ನ ಮೊದಲ ವಿಡಿಯೋದ ಮೂಲಕ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದೆ ಚಿತ್ರತಂಡ.

ಈ ದಶಕದ ಅತಿದೊಡ್ಡ ಪ್ರೇಮಕಥೆ ಅಂತಲೇ ಬಿಂಬಿತವಾಗಿರೋ ʻರಾಧೆ ಶ್ಯಾಮ್ʼ ಬಹುಭಾಷಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಡಾ.ಯು.ವಿ.ಕೃಷ್ಣಂ ರಾಜು ಗರು ಮತ್ತು ಗೋಪಿಕೃಷ್ಣ ಚಲನಚಿತ್ರಗಳು ಪ್ರಸ್ತುತಪಡಿಸಿದ ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ನಿರ್ದೇಶಕರು. ಯುವಿ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರದಲ್ಲಿದ್ದಾರೆ.
ಈ ಚಿತ್ರವನ್ನು ವಂಶಿ, ಪ್ರಮೋದ್ ಮತ್ತು ಪ್ರಸೀಡಾ ನಿರ್ಮಿಸುತ್ತಿದ್ದಾರೆ.
Discussion about this post