ಬೆಂಗಳೂರು : ನಿರೂಪಕ, ಯೂ ಟ್ಯೂಬರ್, ನಟ, ಆರ್ ಜೆ ಹೀಗೆ ಹಲವು ಕೆಲಸಗಳನ್ನು ಮಾಡಿ ಅನುಭವುಳ್ಳ ಕಿರಿಕ್ ಕೀರ್ತಿ ಇದೀಗ ಸಿನಿಮಾ ನಿರ್ದೇಶನಕ್ಕೆ ಮನಸ್ಸು ಮಾಡಿದ್ದಾರೆ.
ಅವರ ನಟನೆಯ ಸಿನಿಮಾ ಇನ್ನೂ ದಡ ಸೇರುವ ಮುನ್ನ ಪ್ರೀತಿ ಮದುವೆ ಇತ್ಯಾದಿ ಅನ್ನುವ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
ಕಿರಿಕ್ ಕೀರ್ತಿಯ ಚೊಚ್ಚಲ ನಿರ್ದೇಶನದ ಪ್ರೀತಿ, ಮದುವೆ ಇತ್ಯಾದಿ ಸಿನಿಮಾದಲ್ಲಿ ರಾಧಾ ರಮಣಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳ್ಳಬೆಟ್ಟದ ದರೋಡೆಕೋರರು ಎಂಬ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟವರು, ಶ್ರೀರಸ್ತು ಶುಭಮಸ್ತು ಮತ್ತು ರಾಧಾ ರಮಣ ಅನ್ನುವ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮನ ತಲುಪಿದ್ದರು.

ಬಳಿಕ ಸಂಕಷ್ಟಕರ ಗಣಪತಿ ಅನ್ನೋ ಸಿನಿಮಾದಲ್ಲಿ ನಟಿಸಿದ್ದ ಶ್ವೇತಾ ಇದೀಗ ಪ್ರೀತಿ, ಮದುವೆ ಇತ್ಯಾದಿ ಸಿನಿಮಾ ಒಪ್ಪಿಕೊಂಡಿದ್ದಾರೆ.
ಕಿರಿಕ್ ಕೀರ್ತಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ಬಳಿಕ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಯಾವುದೇ ಒಂದು ಕೆಲಸದಲ್ಲಿ ಇವರು ನೆಲೆ ಕಂಡುಕೊಂಡಿರಲಿಲ್ಲ. ಇದೀಗ ಚಂದನವನದಲ್ಲಿ ನಿರ್ದೇಶಕರಾಗಿ ನೆಲೆ ಕಂಡುಕೊಳ್ಳುತ್ತಾರೋ ಗೊತ್ತಿಲ್ಲ
ಕಿರಿಕ್ ಕೀರ್ತಿ ಈ ಹಿಂದೆ ಎರಡನೇ ಸಲ,ಮತ್ತು ಚಿತ್ರಾಲಿ ಸಿನಿಮಾಗಳಲ್ಲಿ ನಟಿಸಿದ್ದರು.
ಇನ್ನು ಕೇವಲ ನಿರ್ದೇಶನ ಮಾತ್ರವಲ್ಲದೆ ಕಿರಿಕ್ ಕೀರ್ತಿಯವರೇ ಚಿತ್ರಕ್ಕೆ ಬಂಡವಾಳ ಸುರಿಯಲಿದ್ದಾರೆ.
ತುಳು ಸಿನಿಮಾ ರಂಗದಲ್ಲಿ ಪ್ರಸಿದ್ದವಾಗಿರುವ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಮಾಹಿತಿ ಇದೆ.
ಲಿಖಿತ್ ಶೆಟ್ಟಿ ಈ ಹಿಂದೆ ಸಂಕಷ್ಟಕರ ಗಣಪತಿ, ಮತ್ತು ಫ್ಯಾಮಿಲಿ ಪ್ಯಾಕ್ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ.
Discussion about this post