ಐ ಲವ್ ಯೂ ಚಿತ್ರದ ಕುರಿತಂತೆ ಪ್ರಿಯಾಂಕ ಉಪೇಂದ್ರ ಎತ್ತಿರುವ ಅಪಸ್ವರಕ್ಕೆ ರಚಿತಾ ರಾಮ್ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು “ ಉಪೇಂದ್ರ ಅವರು ದೃಶ್ಯವನ್ನು ನಿರ್ದೇಶನ ಮಾಡಿದ್ದಾರೆ ಎಂದು ನಾನು ಹೇಳಿಲ್ಲ. ನಿರ್ದೇಶನದಲ್ಲಿ ಉಪ್ಪಿ ಸರ್ ಕಿಂಗ್ ಆಗಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಿರ್ದೇಶಕ ಚಂದ್ರು ಅವರು ಎಷ್ಟೋ ಸಲ ಉಪೇಂದ್ರರೊಂದಿಗೆ ಚರ್ಚೆ ನಡೆಸುತ್ತಿದ್ದರು. ಆಗ ನಾನು ಇಲ್ಲಿ ಹೀರೋ ಕಣ್ರೀ ಡೈರೆಕ್ಟರ್ ಅಲ್ಲ ಅನ್ನುತ್ತಿದ್ದರು”.
“ ನಾನು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನನ್ನ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಇನ್ನು ಮುಂದೆ ಈ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು, ಈಗಾಗಲೇ ನಟಿಸಿದ್ದಕ್ಕೆ ವಿಷಾದವಿಲ್ಲ” ಅಂದಿದ್ದಾರೆ.
ಇದಕ್ಕೂ ಮುನ್ನ ಪ್ರತಿ ಸಂದರ್ಶನದಲ್ಲೂ ರಚಿತಾ, ಉಪೇಂದ್ರ ಹೆಸರು ತರುತ್ತಿದ್ದಾರೆ. ಮೊದಲು ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂದು ಹೇಳಿಕೊಳ್ಳಲಿ. ಅದನ್ನ ಬಿಟ್ಟು ಪದೇ ಪದೇ ಉಪೇಂದ್ರ ಹೆಸರು ಹೇಳುವುದು ಯಾಕೆ? ಚಿತ್ರದ ನಿರ್ದೇಶಕ ಚಂದ್ರು, ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್. ಆದರೆ ರಚಿತಾ ರಾಮ್ ಮಾತ್ರ ಉಪೇಂದ್ರ ನಿರ್ದೇಶಕರಾಗಿದ್ದಾರೆ ಅನ್ನುತ್ತಿದ್ದಾರೆ ಎಂದು ಪ್ರಿಯಾಂಕಾ ಉಪೇಂದ್ರ ಕಿಡಿಕಾರಿದ್ದರು.
Discussion about this post