ಬೆಂಗಳೂರು : ಚಂದನವನದ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ‘ಲವ್ ಯೂ ರಚ್ಚು’ ಚಿತ್ರದ ಮೂಲಕ ಮೊದಲ ಬಾರಿಗೆ ಅಜಯ್ ರಾವ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಲವ್ ಯೂ ರಚ್ಚು’ ಚಿತ್ರದ ಮುಹೂರ್ತ ಆರ್ಟ್ ಆಫ್ ಲಿವಿಂಗ್ನಲ್ಲಿ ನಡೆದಿದ್ದು, ರವಿಶಂಕರ್ ಗುರೂಜಿ ‘ಲವ್ ಯೂ ರಚ್ಚು’ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಮುಹೂರ್ತ ಬಳಿಕ ಮಾತನಾಡಿದ ರಚಿತಾ ರಾಮ್ ಮಾತನಾಡಿ, ಲವ್ ಯು ರಚ್ಚು’ ಈ ಟೈಟಲ್ ಕೇಳಿದಾಗ ಅಚ್ಚರಿ ಪಟ್ಟಿದ್ದ ರಚಿತಾ ರಾಮ್ ಇದು ಅವರ ಅಡ್ಡ ಹೆಸರಾಗಿರುವುದರಿಂದ ಮತ್ತು ಶೀಷೀಕೆಯು ಅವರ ಹೆಸರು ಹೊಂದಿರುವುದರಿಂದ ಕಥೆಯನ್ನು ಕೇಳಿದ ನಂತರ ಒಪ್ಪಿಕೊಂಡೆ.
ಸಿನಿಮಾದ ಮುಹೂರ್ತ ಆರ್ಟ್ ಆಫ್ ಲಿವಿಂಗ್ನಲ್ಲಿ ಮಾಡಿದ್ದು, ಗುರೂಜಿ ಆಶೀರ್ವಾದ ಸಿಕ್ಕಿದ್ದು ಬಹಳ ಖುಷಿ ತಂದಿದೆ. ನಾನು ಇದೇ ಮೊದಲ ಬಾರಿಗೆ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿದೆ ಅಂದಿರುವ ರಚಿತಾ ಚಿತ್ರದ ಕಥೆ ಬಿಟ್ಟುಕೊಡಲಿಲ್ಲ. ಹಲವು ಟ್ವಿಸ್ಟ್ ಗಳನ್ನು ಹೊಂದಿರುವ ಸಿನಿಮಾ ಅಂದಿರುವ ರಚಿತಾ ಚಿತ್ರ ಯಾವಾಗ್ಲೂ Happy Ending ಆಗಿರಲು ಬಯಸುತ್ತೇನೆ ಅಂದಿದ್ದಾರೆ.