Thursday, January 28, 2021

ಸಿದ್ದರಾಮಯ್ಯನವರೇ ನಿಮಗೆ ಗೋವು ಸಾಕಲಾಗುತ್ತಿಲ್ಲ ಅನ್ನೋದಾದ್ರೆ ನನ್ನ ಮನೆ ಹತ್ತಿರ ಬಿಡಿ – ಟಾಂಗ್ ಕೊಟ್ಟ ಅಶೋಕ್

Must read

ಗೋ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಕುರಿತಂತೆ ಮೌನಕ್ಕೆ ಶರಣಾದ್ರೆ ಎಲ್ಲಿ ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್ ಏಟು ಬೀಳುತ್ತದೋ ಎಂದು ಭಯಕ್ಕೆ ಬಿದ್ದಿರುವ ಕಾಂಗ್ರೆಸ್ ಪೂರ್ತಿ ಕಾಯ್ದೆಯನ್ನೇ ವಿರೋಧಿಸುತ್ತಿದೆ.

ಬದಲಾಗಿ ಕಾಯ್ದೆಯಲ್ಲಿರುವ ಅನೇಕ ಲೋಪಗಳನ್ನು ತಿದ್ದುಪಡಿ ಮಾಡುವ ಕುರಿತಂತೆ ಒತ್ತಡ ಹೇರಲು ಕಾಂಗ್ರೆಸ್ ಸಿದ್ದವಿಲ್ಲ.

ಈ ನಡುವೆ ಗೋ ಹತ್ಯೆ ನಿಷೇಧ ಕಾಯ್ದೆ ಕುರಿತಂತೆ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಆರ್ ಅಶೋಕ್ ಸಿದ್ದರಾಮಯ್ಯನವರಿಗೆ ಹಸುಗಳನ್ನು ಸಾಕಲು ಸಾಧ್ಯವಾಗದೇ ಹೋದ್ರೆ ನನ್ನ ಮನೆ ಹತ್ತಿರ ತಂದು ಬಿಡಲಿ, ನಾನು ಸಾಕಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅಶೋಕ್, ಮುದಿ ಗೋವನ್ನು ಬಿಜೆಪಿಯವರು ಸಾಕ್ತಾರ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಾವು ಗೋವು ಸಾಕಲು ಸಿದ್ದರಿದ್ದೇವೆ. ನಾವು ಗೋವನ್ನು ಸಾಕುತ್ತೇವೆ, ಜೊತೆಗೆ ನಿಮ್ಮಲ್ಲಿ ಯಾರಾದರೂ ವಯಸ್ಸಾದವರು ಇದ್ರೆ ಅವರನ್ನು ಕಳುಹಿಸಿ, ನಾನು ಸಾಕುತ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

- Advertisement -
- Advertisement -

Latest article