ಬೆಂಗಳೂರು : ಟೋಕಿಯೋ ಒಲಿಂಪಿಕ್ಸ್ ನಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರಿಗೆ ಸುಲಭ ಸವಾಲು ಎದುರಾಗುವ ಸಾಧ್ಯತೆಗಳಿದೆ. ಈಗಾಗಲೇ ಸಿಂಧು ವಿಶ್ವ ಬ್ಯಾಂಡ್ಮಿಂಟನ್ ಚಾಂಪಿಯನ್ ನಲ್ಲಿ 6ನೇ ಶ್ರೇಯಾಂಕವನ್ನು ಪಡೆದಿದ್ದಾರೆ.
ಇನ್ನು ಟೋಕಿಯೋ ಒಲಿಂಪಿಕ್ಸ್ ನ ಲೀಗ್ ಹಂತದಲ್ಲಿ ಪಿವಿ ಸಿಂಧು ವಿಶ್ವದ 34ನೇ ಶ್ರೇಯಾಂಕಿತೆ ಹಾಂಕಾಂಗ್ ನ್ ನ ಟ್ಯುಂಗ್ ನಿಂಗ್ಯೀ ಹಾಗೂ ಇಸ್ರೇಲ್ ನ 58ನೇ ಶ್ರೇಯಾಂಕಿತೆ ಕ್ಸಿನಿಯಾ ಪೊಲಿಕಪ್ರೋವಾ ಅವರನ್ನು ಎದುರಿಸಲಿದ್ದಾರೆ. ಇದರಲ್ಲಿ ಗೆದ್ದವರು ನೌಕೌಟ್ ಹಂತಕ್ಕೆ ಅರ್ಹತೆ ಪಡೆಯುತ್ತಾರೆ.

ಈ ನಡುವೆ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರುವ ಸಲುವಾಗಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿರುವ ಪಿವಿ ಸಿಂಧು, ಶೇರ್ ಚಾಟ್ ನಲ್ಲೂ ಖಾತೆ ತೆರೆದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

Discussion about this post