ಅನುಕಪಂದ ಆಧಾರದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಅಜಿತ್ ರೈ ಅಕ್ರಮ ಆಸ್ತಿ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾದಿದ್ರು
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯುತ್ತಿರುವ ಪಿಲಿಗೊಬ್ಬು ಹೆಸರಿನ ಹುಲಿವೇಷ ಕುಣಿತ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಅಜಿತ್ ರೈ ಹೆಸರು ಹೊತ್ತ ಪ್ಲೆಕ್ಸ್ ತಲೆ ಎತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅಜಿತ್ ರೈ ತಂದೆ ಪುತ್ತೂರಿನಲ್ಲಿ ಭೂ ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗಲೇ ತಂದೆ ತೀರಿಕೊಂಡಿದ್ದರು. ಹೀಗಾಗಿ ಅನುಕಂಪದ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ ಕೆಲಸ ನೀಡಲಾಗಿತ್ತು. ಅಲ್ಲಿ ಕೆಲ ವರ್ಷ ಕೆಲಸ ಮಾಡಿದ್ದ ಅಜಿತ್, ಬಳಿಕ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಬಡ್ತಿ ಪಡೆದು ತಹಶೀಲ್ದಾರ್ ಆಗಿದ್ದರು.

ಅಜಿತ್ ರೈ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು ಮಾತ್ರವಲ್ಲದೆ ಲೋಕಾಯುಕ್ತ ಕಛೇರಿಯಲ್ಲಿ ಹಲವು ದೂರುಗಳು ದಾಖಲಾಗಿತ್ತು. ಇದೇ ಆಧಾರದ ಮೇಲೆ ಕೆಲ ದಿನಗಳ ಹಿಂದೆ ಲೋಕಾಯುಕ್ತ ಪೊಲೀಸರು ಅಜಿತ್ ಕಚೇರಿ ಹಾಗೂ ಆತನ ಸಂಬಂಧಿಕರಿಗೆ ಸೇರಿದ 10 ಪ್ರದೇಶಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣ ದುಬಾರಿ ವಸ್ತುಗಳು ಸಿಕ್ಕಿತ್ತು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ದೇವನಹಳ್ಳಿ ಸಾಕಷ್ಟು ಆಸ್ತಿ ಖರೀದಿಸಿದ್ದ ದಾಖಲೆಗಳು ಸಿಕ್ಕಿತ್ತು.

ಇನ್ನು 150 ಎಕರೆಗಿಂತ ಜಾಸ್ತಿ ಜಮೀನನ್ನು ಬೇನಾಮಿಗಳ ಹೆಸರುಗಳಲ್ಲಿ ಈ ಅಧಿಕಾರಿ ಹೊಂದಿದ್ದ ಅನ್ನಲಾಗಿದೆ. ಲೋಕಾಯುಕ್ತ ದಾಳಿ ವೇಳೆ ಸುಮಾರು 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿತ್ತು. ಅಂದಾಜು ಪ್ರಕಾರ ಅಜಿತ್ ರೈ ಆಸ್ತಿ ಮೊತ್ತ 500 ಕೋಟಿ ದಾಟುತ್ತದೆ ಅನ್ನುವುದು ಮಾಧ್ಯಮಗಳ ವರದಿ.
Read This : ಇದನ್ನು ಮಾಡದಿದ್ದರೆ ಪಿಎಂ ಕಿಸಾನ್‌ನ 15ನೇ ಕಂತಿನ ಹಣ ಬರಲ್ಲ

ಈ ದಾಳಿಯ ಬಳಿಕ ಜೈಲು ವಾಸ, ಜಾಮೀನು ಹೀಗೆ ಅನೇಕ ಬೆಳವಣಿಗೆಗಳು ನಡೆದಿತ್ತು. ಈ ನಡುವೆ ಇದೀಗ ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಿದ ಆರೋಪದಡಿಯಲ್ಲಿ ಅಜಿತ್ ಕುಮಾರ್ ರೈ ಸೊರಕೆ ಸೇರಿ ಕೆಲ ಕೆಎಎಸ್ ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆ FIR ಅನ್ನು ಕೂಡಾ ದಾಖಲಿಸಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿ ಹೆಸರಿನ ಫ್ಲೆಕ್ಸ್ ಅವರದ್ದೇ ಹುಟ್ಟೂರಿನಲ್ಲಿ ರಾರಾಜಿಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Discussion about this post