ಬೆಂಗಳೂರು : ಕರ್ನಾಟಕದ ಧಾರಣಾ ಸಾಮರ್ಥ್ಯವನ್ನು ಮೀರಿ ಟಿವಿ ವಾಹಿನಿಗಳು ಕಾರ್ಯಾಚರಿಸುತ್ತಿದೆ. ಪ್ರಸ್ತುತ 10ಕ್ಕೂ ಮೀರಿ ಸುದ್ದಿವಾಹಿನಿಗಳಿದ್ದು, ಈ ಸಂಖ್ಯೆಯನ್ನು ದಾಟಿ ಮನೋರಂಜನಾ ವಾಹಿನಿಗಳು ಪ್ರಸಾರವಾಗುತ್ತಿದೆ. ಜೊತೆಗೆ ಆರೋಗ್ಯ, ಧಾರ್ಮಿಕ ವಾಹಿನಿಗಳು ಕೂಡಾ ಇದೆ. ಈ ನಡುವೆ ಒಂದಿಷ್ಟು ಹೊಸ ಸುದ್ದಿ ಮತ್ತು ಮನೋರಂಜನಾ ವಾಹಿನಿಗಳು ಕೆಲವೇ ತಿಂಗಳುಗಳಲ್ಲಿ ಪ್ರಸಾರ ಪ್ರಾರಂಭಿಸಲಿದೆ. ಇದರಲ್ಲಿ ಉಳಿಯುವುದೆಷ್ಟು ಅಳಿಯುವುದೆಷ್ಟು ಗೊತ್ತಿಲ್ಲ. ಕಾರಣ ಸಿಂಪಲ್, ಸಮಯ, ಸುದ್ದಿ, ಕಾವೇರಿ ಸುಪ್ರಭಾತ ಹೀಗೆ ಹಲವು ವಾಹಿನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಹಾಕಿವೆ.
ಇದನ್ನೂ ಓದಿ : ಬಯಲಾಯ್ತೇ…ಟೂಲ್ ಕಿಟ್ ರಹಸ್ಯ :TV5 Executive Editor ಹುದ್ದೆಗೆ ಚಂದನ್ ಶರ್ಮಾ ರಾಜೀನಾಮೆ
ಈ ಹಿಂದೆ ಸುದ್ದಿ ಮತ್ತು ಮನೋರಂಜನೆಯನ್ನು ಒಟ್ಟಿಗೆ ಪ್ರಸಾರ ಮಾಡುತ್ತಿದ್ದ infotainment ವಾಹಿನಿಗಳಿತ್ತು. ನಿಧಾನವಾಗಿ ಮನೋರಂಜನೆ ಮತ್ತು ಸುದ್ದಿ ವಾಹಿನಿಗಳು ಪ್ರತ್ಯೇಕವಾದವು. ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ Pushkara Mallikarjunaiah ಹೊಸ infotainment ವಾಹಿನಿ ಪ್ರಾರಂಭಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಕಿರಿತ್ ಪಾರ್ಟಿ, ಶ್ರೀಮನ್ನಾರಾಯಣ ಹೀಗೆ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಪುಷ್ಕರ್ ದಕ್ಷಿಣ ಭಾರತದಲ್ಲಿ ಈ ವರೆಗೆ ಇರದಂತಹ ವಾಹಿನಿಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ತಾಂತ್ರಿಕತೆ ಮತ್ತು ಕಟೆಂಟ್ ನಲ್ಲಿ ನಮ್ಮ ವಾಹಿನಿ ಡಿಫರೆಂಟ್ ಅನ್ನುವುದು ಪುಷ್ಕರ್ ಮಾತು
ಇದನ್ನೂ ಓದಿ : ರಾಜೀನಾಮೆಯ ಹಿಂದಿನ ಸತ್ಯ : ಬೈಯ್ತ ಕೂತ್ಕೂಕೊಳ್ಳಿ..ಬೈಯ್ತ ಕೂತ್ಕೂಕೊಳ್ಳಿ..ಬೈಯ್ತಾ ಕೂತ್ಕೂಕೊಳ್ಳಿ.

ಈ ವಾಹಿನಿಯಲ್ಲಿ 24 ಗಂಟೆಯ ಪೈಕಿ 2 ರಿಂದ 3 ಗಂಟೆ ಸುದ್ದಿ ಪ್ರಸಾರವಾಗಲಿದೆ. ಉಳಿದ ಸಮಯದಲ್ಲಿ ಮನೋರಂಜನೆ, ಮಾಹಿತಿ, ಜಾಗೃತಿ, ಸ್ಟಾಕ್ ಮಾರುಕಟ್ಟೆ, ಕೃಷಿ ಕುರಿತಾದ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಅಂದ ಹಾಗೇ ಈ ವಾಹಿನಿಯನ್ನು ಚಂದನ್ ಶರ್ಮಾ ಮುನ್ನಡೆಸಲಿದ್ದು, TV5 ಮೋದಿ ವಿರೋಧಿ ನಿಲುವಿನ ವಿರುದ್ದ ಸಿಡಿದು ಬಂದವರು ಹೊಸ ವಾಹಿನಿ ಕಟ್ಟಲಿದ್ದಾರೆ. ಇನ್ನು ಚಂದನ್ ಶರ್ಮಾ ಈ ಹಿಂದೆ ಕೆಲ ಸುದ್ದಿವಾಹಿನಿಗಳನ್ನು ಕಟ್ಟಿದ್ದಾರೆ. ಆದರೆ ಅದನ್ನು ಅವರು ಸುದೀರ್ಘ ಕಾಲ ಮುನ್ನಡೆಸಲಿಲ್ಲ ಅನ್ನುವುದು ಗಮನಾರ್ಹ ಅಂಶ. ಏನಿವೇ ಪುಷ್ಕರ್ ಹಾಗೂ ಚಂದನ್ ಶರ್ಮಾ ( chandan sharma ) ಅವರ ಹೊಸ ಪ್ರಯತ್ನಕ್ಕೆ ಶುಭವಾಗಲಿ. ಇರೋ ವಾಹಿನಿಗಿಂತ ಡಿಫರೆಂಟ್ ಆಗಿರೋ ವಾಹಿನಿಯೊಂದು ಮೂಡಿ ಬರಲಿ.

ಇದನ್ನೂ ಓದಿ : ರಾಷ್ಟ್ರೀಯವಾದಿ ಪತ್ರಕರ್ತ ಅಂದ್ರೆ ಯಾರು…? ಅವರೆಲ್ಲಾ ಬಿಜೆಪಿಗೆ ಸೇರಿದವರೇ…?
Discussion about this post