Monday, April 19, 2021

ಕನ್ನಡ ಸಿನಿಮಾವನ್ನು ಕೊಲೆ ಮಾಡಬೇಡಿ…. ಭಾವುಕರಾಗಿ ಯಡಿಯೂರಪ್ಪನವರಿಗೆ ಕೈ ಮುಗಿದ ಪುನೀತ್

Must read

- Advertisement -
- Advertisement -

ಕೊರೋನಾ ಎರಡನೆಯ ಅಲೆಯ ಅಬ್ಬರದ ನಡುವೆ ಯುವರತ್ನ ಚಿತ್ರ ಯಶಸ್ವಿಯತ್ತ ಸಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಹೊರಡಿಸಿದ ಕೊರೋನಾ ಮಾರ್ಗಸೂಚಿಯಿಂದ ತತ್ತರಿಸಿ ಹೋಗಿದೆ.

ಚಿತ್ರಮಂದಿರಗಳಲ್ಲಿ ಶೇ50ರಷ್ಟು ಮಾತ್ರ ಸೀಟು ಭರ್ತಿ ಅವಕಾಶ ಎಂದಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪುನೀತ್ ರಾಜ್ ಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಂತ ಅವರಿಗೆ ಮಾರ್ಗಸೂಚಿಯ ಬಗ್ಗೆ ಬೇಸರವಿಲ್ಲ. ಮೂರು ದಿನಗಳ ಹಿಂದೆ ನಮಗೆ ಇಂತಹುದೊಂದು ಮಾರ್ಗಸೂಚಿಯ ಮುನ್ಸೂಚನೆ ಕೊಟ್ಟಿದ್ರೆ, ಚಿತ್ರ ಬಿಡುಗಡೆಯನ್ನೇ ಮುಂದಕ್ಕೆ ಹಾಕುತ್ತಿದ್ದೆವು. ಸೋಮವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲೂ ಈ ಬಗ್ಗೆ ನಿರ್ಧಾರವಾಗಿರಲಿಲ್ಲ. ಹೀಗಾಗಿ ನಾವು ಧೈರ್ಯ ಮಾಡಿ ಸಿನಿಮಾ ಬಿಡುಗಡೆ ಮಾಡಿದ್ದೇವೆ. ಜೊತೆಗೆ 15 ದಿನಗಳ ಹಿಂದೆ ಸರ್ಕಾರ ಮಾಡಿದ ಟ್ವೀಟ್ ನೋಡಿ ನಾವು ಸಿನಿಮಾ ಬಿಡುಗಡೆ ಮಾಡಿದ್ದೇವೆ.

ಇದನ್ನೂ ಓದಿ : ಬೈ ಎಲೆಕ್ಷನ್ ಕ್ಯಾಂಪೇನ್ ಮೊದಲು ಬಂದ್ ಮಾಡಿ….ಆಮೇಲೆ ನಿಮ್ಮ ಈ ಬದನೆಕಾಯಿ ರೂಲ್ಸ್….

ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ ಹೀಗಾದ್ರೆ ನಮ್ಮ ಕಥೆಯೇನಾಗಬೇಕು ಎಂದು ಪುನೀತ್ ಭಾವುಕರಾಗಿದ್ದಾರೆ. ಈಗಾಗಲೇ ಚಿತ್ರರಂಗ ಸಂಕಷ್ಟದಲ್ಲಿದೆ. ಬೇರೆ ಯಾರಿಗೂ ಇಲ್ಲದ ರೂಲ್ಸ್ ಗಳನ್ನು ಚಿತ್ರರಂಗಕ್ಕೆ ಹೇರುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪುನೀತ್, ಕೈ ಮುಗಿದು ಬೇಡಿಕೊಳ್ಳುತ್ತೇನೆ. ಶೇ 100ರಷ್ಟು ಭರ್ತಿ ಮಾಡಲು ಅವಕಾಶ ಕೊಡಿ ಅಂದಿದ್ದಾರೆ.

ಚಿತ್ರಮಂದಿರಗಳಲ್ಲಿ ಜನ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ. ಸ್ಯಾನಿಟೈಸ್ ಕಾರ್ಯ ನಡೆಯುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಿದ್ದ ಮೇಲೂ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡರೆ ನಮಗೆ ಉಸಿರಾಡುವುದೇ ಕಷ್ಟ ಅಂದಿದ್ದಾರೆ ಪುನೀತ್.

ಇದನ್ನೂ ಓದಿ : ಯುವರತ್ನ ಪಾಲಿಗೆ ಶತ್ರುವಾದ ರಾಜ್ಯ ಸರ್ಕಾರ… ದೊಡ್ಮನೆ ಹುಡುಗ ಮಾಡಿದ ತಪ್ಪಾದ್ರು ಏನು..?

ಸರ್ಕಾರ ನಮ್ಮ ಸೇಫ್ಟಿ ಸಲುವಾಗಿಯೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಆದರೆ ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ ಜಾರಿ ಮಾಡಿರುವುದು ಸರಿಯಲ್ಲ. ಭಾನುವಾರ ತನಕದ ಶೋಗೆ ಟಿಕೆಟ್ ಮಾರಾಟ ಮಾಡಲಾಗಿದೆ.

ಹೀಗಾಗಿ ಒಂದಿಷ್ಟು ದಿನಗಳ ಮಟ್ಟಿಗೆ ಶೇ50ರಷ್ಟು ಸೀಟು ತುಂಬುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು. ಇಲ್ಲವಾದರೆ ನಾವು ಚೇತರಿಸಿಕೊಳ್ಳುವುದು ಕಷ್ಟ ಅಂದಿದ್ದಾರೆ.

- Advertisement -
- Advertisement -
- Advertisement -

Latest article