ಪ್ರವಾಸಿ ವೀಸಾದಡಿಯಲ್ಲಿ ಬೆಂಗಳೂರಿಗೆ ಬಂದಿದ್ದ ಉಗಾಂಡ ದೇಶದ ಮಹಿಳೆಯೊಬ್ಬಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ರಾಮಮೂರ್ತಿ ನಗರದ ಮನೆಯೊಂದರಲ್ಲಿ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಈ ದಾಳಿ ನಡೆಸಲಾಗಿದೆ. ಈ ವೇಳೆ ಉಗಾಂಡ ದೇಶದ ನಕ್ಕಾಜಿ ಫೈನಾಹ ಮತ್ತು ಆಕೆಯ ಸ್ನೇಹಿತ ಫೈಜಲ್ ಅಹ್ಮದ್ ನನ್ನು ಬಂಧಿಸಲಾಗಿದೆ. ಜೊತೆಗೆ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.
ರಾಮಮೂರ್ತಿ ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ ಫೈಜಲ್ ವಿದೇಶಿ ಮಹಿಳೆಯರ ಜೊತೆಗೆ ನೆಲೆಸಿದ್ದ,
ಈ ದಂಧೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರದಿರುವುದು ನಿಜಕ್ಕೂ ಲೋಪವೇ ಸರಿ. ಸ್ಥಳೀಯ ಪೊಲೀಸ್ ಠಾಣೆಗೆ ಸಿಗದ ಮಾಹಿತಿ ದೂರದ ಸಿಸಿಬಿ ಸಿಕ್ಕಿದೆ ಅಂದ್ರೆ ಗೃಹ ಸಚಿವರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ತಾನೇ.
Discussion about this post