ಯಾರಿಗಾದ್ರೂ ಸರಿ ಎರಡು ನಾಲಗೆ ಇರಬಾರದು. ಇವತ್ತು ಒಂದು ಹೇಳುವುದು ನಾಳೆ ಮತ್ತೊಂದು ಮಾಡುವ ಚಾಳಿ ತುಂಬಾ ಅಪಾಯಕಾರಿ.
ಇದೀಗಪ್ರಿಯಾಂಕ ಚೋಪ್ಡಾ ಕೂಡಾ ಮಾಡಿರುವುದು ಅದನ್ನು. ಅವತ್ತು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಬೇಡಿ ಪರಿಸರ ಮಾಲಿನ್ಯವಾಗುತ್ತದೆ ಎಂದು ಮನವಿ ಮಾಡಿದ್ದೇನು. ಅವತ್ತು ಪ್ರಿಯಾಂಕ ಮಾತುಕೇಳಿ, ಸೆಲೆಬ್ರಿಟಿ ಅಂದರೆ ಹೀಗಿರಬೇಕು, ಪರಿಸರ ಕಾಳಜಿಗೊಂದು ಭೇಷ್ ಅಂದಿದ್ದರು ಜನ.
ಆದರೆ ಆಕೆ ಮದುವೆಯಾಗಿದ್ದೇ ತಡ, ಅದೇ ಜನ ಅವತ್ತು ಪ್ರಿಯಾಂಕಳನ್ನು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.ಸಾಮಾಜಿಕ ಜಾಲ ತಾಣವನ್ನು ಸೆಗಣಿ ಸಾರಿಸಿ ತೊಳೆದ್ರು ಸ್ವಚ್ಥವಾಗದು ಆ ಮಟ್ಟಿಗೆ ಛೀ..ಥೂ ಎಂದು ಉಗಿದಿದ್ದಾರೆ.
ಉಗಿಯದಿರಲು ಸಾಧ್ಯವೇ ಇಲ್ಲ. ನುಡಿದಂತೆ ನಡೆದಿದ್ರೆ ಏನು ಆಗ್ತಾ ಇರಲಿಲ್ಲ. ಅವತ್ತು ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಅಂದ ಪ್ರಿಯಾಂಕ ತನ್ನ ಮತ್ತು ನಿಕ್ಕಿ ಮದುವೆಗೆ ಕೋಟಿ ಗಟ್ಟಲೆಯ ಪಟಾಕಿ ಸಿಡಿಸಿದ್ದಾಳೆ. ಇದನ್ನು ಪ್ರತಿಷ್ಠಿತ ANI ಸುದ್ದಿ ಸಂಸ್ಥೆ ಕೂಡಾ ಪ್ರಸಾರ ಮಾಡಿದೆ.
ಇದರಿಂದ ಕೆಂಡಾಮಂಡಲರಾಗಿರುವ ನೆಟ್ಟಿಗರು ಸಿಕ್ಕಾಪಟ್ಟೆ ಜಾಡಿಸಿದ್ದಾರೆ. ಹೇಳುವುದೊಂದು ಮಾಡುವುದೊಂದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಪಟಾಕಿ ಸುಡಬೇಡಿ ಪಿಗ್ಗಿಗೆ ಉಸಿರಾಟದ ಸಮಸ್ಯೆ ಇದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು ಕೆಲವರು ಅದು ಪರಿಸರ ಪ್ರಿಯ ಪಟಾಕಿ ಅಂದರೆ, ಅದ್ಯಾವ ಹೊಗೆ ಸೂಸುವ ಪಟಾಕಿ ಪರಿಸರ ಪ್ರಿಯವಾಗಲು ಸಾಧ್ಯ ಅಂದಿದ್ದಾರೆ. ಒಟ್ಟಿನಲ್ಲಿ ಒಳ್ಳೆಯ ನಟಿಯೊಬ್ಬಳು ತನ್ನ ಮದುವೆ ದಿನದ ಎಡವಟ್ಟು ಮೂಲಕ ಖಳನಾಯಕಿಯಾಗಿದ್ದು ಸುಳ್ಳಲ್ಲ.
Discussion about this post