ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲಾ ಆಡಳಿತ ಮಂಡಳಿ ಆಕ್ರೋಶ
ಭ್ರಷ್ಟಾಚಾರ…. ಭ್ರಷ್ಟಾಚಾರ…. ಭ್ರಷ್ಟಾಚಾರ…. ಇದು ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿ ಬಂದಿರುವ ದೂರು. ಪ್ರತಿಪಕ್ಷಗಳನ್ನು ಇದನ್ನೇ ಮುಂದಿಟ್ಟುಕೊಂಡು ಬೀದಿಗಿಳಿದಿವೆ.
ಈ ನಡುವೆ ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ ಕಾಂಡವವಾಡುತ್ತಿದೆ ಅನ್ನುವ ಆರೋಪ ಕೇಳಿ ಬಂದಿದೆ. ಸರ್ಕಾರದ ನಿಯಮಗಳ ಅನುಷ್ಠಾನದ ಹೆಸರಿನಲ್ಲಿ BEO,DDPIಗಳ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ದೂರಿದೆ.
ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಣ ಇಲಾಖೆಯಲ್ಲೇ ಹೀಗಾಗುತ್ತಿರುವುದು ದುರಂತ
ಈ ಬಗ್ಗೆ ಮಾತನಾಡಿರುವ ಕರ್ನಾಟಕ ಖಾಸಗಿ ಶಾಲಾ ಬೋಧಕ, ಬೋಧಕೇತರ ವರ್ಗಗಳ ಸಮನ್ವಯ ಸಮಿತಿ (KPMTCC) ಸಂಚಾಲಕ ಶಶಿಕುಮಾರ್, ಶಾಲಾ ಮಾನ್ಯತೆ ನವೀಕರಣಕ್ಕಿರುವ ಕಠಿಣ ಮಾನದಂಡಗಳು, ಅಧಿಕಾರಿಗಳ ಕಾಟ, ಲಂಚ ಬೇಡಿಕೆಯಿಂದ ಶಾಲೆಗಳನ್ನು ನಡೆಸೋದು ಕಷ್ಟವಾಗಿದೆ. ಈ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮಕ್ಕೆ ತಂದರೂ ಪರಿಹರಿಸದೇ ಇರುವುದನ್ನು ಖಂಡಿಸಿ ವಿವಿಧ ಖಾಸಗಿ ಶಾಲಾ ಸಂಘಟನೆಗಳು ಆಗಸ್ಟ್ 15 ರಂದು ಕರಾಳ ದಿನ ಆಚರಣೆಗೆ ತೀರ್ಮಾನಿಸಿದೆ ಅಂದಿದ್ದಾರೆ.
ಹೊಸ ಶಾಲೆಗಳನ್ನು ಆರಂಭಿಸಲು ಜಾರಿಗೆ ತಂದಿರುವ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆಯಂತಹ ಅನೇಕ ನಿಯಮಗಳನ್ನು, ಈಗ ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಶಾಲೆಗಳಿಗೂ ಅನ್ವಯಿಸಲಾಗುತ್ತಿದೆ.
ಈ ಬಗ್ಗೆ ಕಾನೂನು ಹೋರಾಟ ನಡೆದು, ನ್ಯಾಯಾಲಯ ಸರ್ಕಾರಕ್ಕೆ ಅನೇಕ ನಿರ್ದೇಶನಗಳನ್ನು ಕೂಡಾ ನೀಡಿದೆ. ಆದರೆ ಶಿಕ್ಷಣ ಇಲಾಖೆ ಅದನ್ನು ಪಾಲಿಸುತ್ತಿಲ್ಲ. ಮತ್ತೊಂದು ಕಡೆ ಹೆಸರಿನಲ್ಲಿ BEO,DDPIಗಳ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗಿದೆ ಎಂದು ಶಶಿಕುಮಾರ್ ದೂರಿದ್ದಾರೆ.
Around 8,000 Karnataka private schools to observe ‘Black Independence Day’ to protest ‘corruption’ in Education department.
The protest, according to the body, is against the significant challenges in operating freely due to a “systemic corruption and harassment” by various government departments in Karnataka.