ನವದೆಹಲಿ : ಕೊರೋನಾ ವೈರಸ್ ಹರಡಿದ್ದು ಎಲ್ಲಿಂದ ಅನ್ನುವುದು ಯಾರಿಗೂ ಗೊತ್ತಿಲ್ಲ. ಬಹುತೇಕ ಮಂದಿ ಚೀನಾದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಆದರೆ ಸೂಕ್ತ ಸಾಕ್ಷ್ಯ ಒದಗಿಸಲು ಸಾಧ್ಯವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿಯೂ ಕೊರೋನಾ ವೈರಸ್ ಮೂಲ ಹಚ್ಚಲು ವಿಫಲವಾಗಿದೆ.
ಇದೀಗ ಕೊರೋನಾ ವೈರಸ್ ಮೂಲ ಶೋಧಿಸಲು ಹೊರಟಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎಗೆ ಆದೇಶಿಸಿದ್ದಾರೆ.
90 ದಿನಗಳ ಒಳಗಾಗಿ ತನಿಖೆ ಮುಕ್ತಾಯಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದು ಅಗತ್ಯವಿರುವ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಅಗತ್ಯವಿರುವ ವಿಷಯ ಅಂದ್ರೆ ತನಿಖೆ ಮೂಲ ಚೀನಾದಿಂದಲೇ ಪ್ರಾರಂಭವಾಗಲಿದೆ. ಹೀಗಾಗಿ ಚೀನಾಗೆ ನಿರ್ದಿಷ್ಟ ಪ್ರಶ್ನೆಗಳನ್ನು ಸಿಐಎ ಕೇಳಲಿದೆ. ಒಂದು ವೇಳೆ ಚೀನಾ ಸೂಕ್ತ ಉತ್ತರ ಕೊಡದಿದ್ರೆ ವಿಶ್ವದ ದೊಡ್ಡ ಗರಂ ಆಗೋದು ಖಚಿತ.
ಕೆಲ ದಿನಗಳ ಹಿಂದಷ್ಟೇ ಅಮೆರಿಕಾದ ಗುಪ್ತಚರ ಸಂಸ್ಥೆಯ ವರದಿ ಪ್ರಕಾರ ಕೊರೋನಾ ಸೋಂಕು ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಲಜಿಯಿಂದ 2019ರಲ್ಲಿ ಸೋರಿಕೆಯಾಗಿತ್ತು ಎಂದು ಹೇಳಿತ್ತು. ಇದಕ್ಕೆ ಸಾಕ್ಷಿಯಾಗಿ 2019ರಲ್ಲಿ ವೈರಲಾಜಿ ಸಂಸ್ಥೆಯ ಮೂವರು ಸಂಶೋಧಕರು ಅನಾರೋಗ್ಯಕ್ಕೆ ಗುರಿಯಾಗಿದ್ದರು ಎಂದು ಉಲ್ಲೇಖಿಸಿತ್ತು.
ಇದನ್ನು ಓದಿ : ಕೊರೋನಾ ಚೀನಾ ವೈರಸ್ ವಾದಕ್ಕೆ ಸಿಕ್ತು ಮತ್ತೊಂದು ಮಹತ್ವದ ಸಾಕ್ಷಿ
ಇನ್ನು ವೈರಸ್ ಮೂಲ ಚೀನಾ ಅನ್ನುವ ಕುರಿತ ಆರೋಪಗಳು ಬಂದಾಗ, ಡ್ರ್ಯಾಗನ್ ರಾಷ್ಟ್ರ ಅದನ್ನು ನಿರಾಕರಿಸುತ್ತಲೇ ಬಂದಿತ್ತು. ಈ ಹಿಂದೆ ಡೋನಾಲ್ಡ್ ಟ್ರಂಪ್ ಚೈನಾ ವೈರಸ್ ಎಂದು ಕರೆದಾಗ ಹಾಗೆಲ್ಲ ಅನ್ನಬೇಡಿ ಎಂದು ಸೂಚಿಸಿತ್ತು. ಅಮೆರಿಕಾದಲ್ಲಿ ಅಧ್ಯಕ್ಷರು ಬದಲಾದರೂ, ರಾಷ್ಟ್ರದ ನಿಲುವಿನಲ್ಲಿ ಬದಲಾಗಿಲ್ಲ. ಹೀಗಾಗಿ ಇದೀಗ ಈ ತನಿಖೆಗೆ ಆದೇಶ ನೀಡಲಾಗಿದೆ.
Discussion about this post