ಪುನೀತ್ ಅವರ ಹೊಸ ಸಿನಿಮಾ ‘ದ್ವಿತ್ವ’ದ ಪೋಸ್ಟರ್ ಬಿಡುಗಡೆಯಾಗಿದೆ. ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿರುವ ಪೋಸ್ಟರ್ ಇದೊಂದು ಸೈಕಲಾಜಿಕಲ್ ಕಥಾಹಂದರವನ್ನು ಹೊಂದಿರಲಿದೆ ಅನ್ನುವ ಸುಳಿವನ್ನು ಬಿಟ್ಟುಕೊಟ್ಟಿದೆ.
ಇನ್ನು ಹೊಂಬಾಳೆ ಸಂಸ್ಥೆಗೆ ಪುನೀತ್ ಜೊತೆಗಿನ ನಾಲ್ಕನೇ ಪ್ರಾಜೆಕ್ಟ್ ಇದಾಗಿದೆ. ಜೊತೆಗೆ ಹೊಂಬಾಳೆ ಅದ್ದೂರಿ ಸಿನಿಮಾಗಳನ್ನು ತಯಾರಿಸುವಲ್ಲಿ ಎತ್ತಿದ ಕೈ. ಆದರೆ ‘ದ್ವಿತ್ವ’ ಸಿನಿಮಾ ಅದ್ದೂರಿಯಾಗಿ ತಯಾರಾಗುವ ಸಿನಿಮಾದಂತೆ ಕಾಣಿಸುತ್ತಿಲ್ಲ. ಹೀಗಾಗಿಯೇ ಸಿಂಪಲ್ ನಿರ್ದೇಶಕರ ಜೊತೆಗಿನ ಕಾಂಬಿನೇಷನ್ ಕುತೂಹಲ ಕೆರಳಿಸಿದೆ.
ಇನ್ನು ‘ದ್ವಿತ್ವ’ ಸಿನಿಮಾದ ಛಾಯಾಗ್ರಹಣವನ್ನು ಪ್ರೀತಾ ಜಯರಾಮನ್ ಮಾಡಲಿದ್ದಾರೆ. ಅದರಲ್ಲಿ ಏನು ವಿಶೇಷ ಅನ್ನಬೇಡಿ.ಪ್ರೀತಾ ಜಯರಾಮನ್ ಕೆಲವೇ ಕೆಲವು ಮಹಿಳಾ cinematographerಗಳ ಪೈಕಿ ಒಬ್ಬರು.
2013ರಲ್ಲಿ cinematographer ಆಗಿ ಕಾರ್ಯಪ್ರಾರಂಭಿಸಿದ ಪ್ರೀತಾ 15 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಇದರಲ್ಲಿ 5 ಕನ್ನಡ ಸಿನಿಮಾಗಳು ಸೇರಿದೆ. ‘ದ್ವಿತ್ವ’ ಅವರ 6ನೇ ಕನ್ನಡ ಪ್ರಾಜೆಕ್ಟ್.
ಈ ಹಿಂದೆ ಐಂದೊದ್ಲ ಐದು, ಒಗ್ಗರಣೆ. ಬಾಕ್ಸರ್, ಆದಿ ಲಕ್ಷ್ಮಿ ಪುರಾಣ, ಬಡವರ ರಾಸ್ಕಲ್ ಸಿನಿಮಾಗೆ ಇವರು ಕೆಲಸ ಮಾಡಿದ್ದಾರೆ.
Discussion about this post