ಬಿಗ್ ಬಾಸ್ ಮನೆಯ ಆಟ ಹೇಗೆ ಆಡಬೇಕು ಅನ್ನುವುದನ್ನು ಇದೀಗ ಬಹುತೇಕ ಸ್ಪರ್ಧಿಗಳು ಅರಿತುಕೊಂಡಿದ್ದಾರೆ.
ಬ್ರೋ, ಅಣ್ಣಾ, ಅಕ್ಕ ಮಾವ ಅನ್ನೋದೆಲ್ಲಾ ಕೇವಲ ಬಾಯಿ ಮಾತಿಗೆ ಮಾತ್ರ ಅನ್ನುವುದು ಅರಿವಾಗಿದೆ. ಒಂದಿಷ್ಟು ಸೈಲೆಂಟ್ ಆಗಿದ್ರು ಬುಡಕ್ಕೆ ಬೆಂಕಿ ಅನ್ನುವುದು ಗೊತ್ತಾಗುತ್ತಿದ್ದಂತೆ ಎಲ್ಲರೂ ಕೆಂಡವಾಗಲಾರಂಬಿಸಿದ್ದಾರೆ.
ಅದರಲ್ಲೂ ಪ್ರಶಾಂತ್ ಸಂಬರಗಿ ಮತ್ತು ಅರವಿಂದ್ ನಡುವಿನ ತಿಕ್ಕಾಟ ಒಂದಿಷ್ಟು ಹೆಚ್ಚಾಗಿದೆ. ಪ್ರಶಾಂತ್ ಸಂಬರಗಿ ಆಟವನ್ನು ಅರಿತಿರುವ ಅರವಿಂದ್ ಇದೀಗ ಅವರ ಮುಂದೆ ಒಂದಿಷ್ಟು ಹೆಚ್ಚು ಅಬ್ಬರಿಸಲಾರಂಭಿಸಿದ್ದಾರೆ. ಜೊತೆಗೆ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಅತಿರೇಕದಿಂದ ಆಡುವುದು ಕೂಡಾ ಒಂದು ಕಾರಣ. ಹೀಗಾಗಿ ಸಂಬರಗಿ ಮುಂದೆ ಅರವಿಂದನದ್ದು ಬರೀ ಏಕವಚನ.
ಇನ್ನು ಆಟ ಪ್ರಾರಂಭವಾದ ಮೊದಲ ದಿನಗಳಲ್ಲಿ ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಆದರೆ ಜೋಡಿ ಟಾಸ್ಕ್ ನಲ್ಲಿ ಯಾವಾಗ ದಿವ್ಯಾ ಅರವಿಂದ್ ಜೊತೆಯಾದರೋ ಸಂಬರಗಿ ಬೆಂಕಿ ಹಾಕಿಕೊಂಡಿದ್ದಾರೆ.
ಅರೇ ನಾನು ಹೊತ್ತು ತಿರುಗಿದ ಹುಡುಗಿ, ಈಗ ನೋಡಿದ್ರೆ ಅಲ್ಲಿ ಅನ್ನುವುದೇ ಇದಕ್ಕೆ ಕಾರಣ. ಟಾಸ್ಕ್ ಮುಗಿದ ಮೇಲೂ ಉರುಡುಗ ಮತ್ತು ಅರವಿಂದ್ ಸಿಕ್ಕಾಪಟ್ಟೆ ಆತ್ಮೀಯರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲೇ ಈ ಬಗ್ಗೆ ಪಿಸುಮಾತುಗಳು ಕೇಳಲಾರಂಭಿಸಿದೆ. ಇನ್ನೂ ಟಿವಿ ಮುಂದೆ ಬಿಗ್ ಬಾಸ್ ನೋಡುವ ಮಂದಿಯಂತು ಉಡುಪಿಗೊಬ್ಲು ಸೊಸೆ ಸಿಕ್ಲು ಅನ್ನುವಂತೆ ಮಾತನಾಡುತ್ತಿದ್ದಾರೆ.

ಈ ನಡುವೆ ಅರವಿಂದ್ ಹಾಗೂ ಸಂಬರಗಿ ನಡುವೆ ತಿಕ್ಕಾಟ ಶುರುವಾಗಿದೆ. ಈ ವೇಳೆ ಅಧಿಕ ಪ್ರಸಂಗ ಮಾತನಾಡಿದ್ರೆ ಹಲ್ಲು ಉದುರಿಸ್ತಿನಿ ಎಂದು ಪ್ರಶಾಂತ್ ಗೆ ಅರವಿಂದ್ ಎಚ್ಚರಿಕೆ ಕೊಟ್ಟಿದ್ದಾರೆ.
ಅರವಿಂದ್ ಅಬ್ಬರದಿಂದ ಅಂಡು ಸುಟ್ಟ ಬೆಂಕಿನಂತಾದ ಸಂಬರಗಿ, ನೀನು ದೊಡ್ಡ ಪಂಟ್ರು, ನಿನ್ನ ಗರ್ಲ್ ಫ್ರೆಂಡ್ ಕೈ ಕಿತ್ತುಕೊಂಡಿದಕ್ಕಾ ಬೇಜಾರಾಗಿದ್ದು ಎಂದು ಖಾಸಗಿ ವಿಷಯಕ್ಕೆ ಕೈ ಹಾಕಿದ್ದಾರೆ.
ಅಷ್ಟೇ ದೂರದಲ್ಲಿ ಸೈಲೆಂಟ್ ಆಗಿ ಕೂತಿದ್ದ ದಿವ್ಯಾ ಉರುಡುಗ ಮೈಮೇಲೆ ಬಂದವರಂತೆ ಎದ್ದು ಬಂದಿದ್ದಾರೆ. ಬಂದ ವೇಗಕ್ಕೆ ಸಂಬರಗಿ ಎರಡೇಟು ತಿಂದ್ರು ಅನ್ನುವಂತಿತ್ತು.
ಆದರೆ ಹಾಗೇ ಆಗಲಿಲ್ಲ, ಬದಲಾಗಿ , ಏಯ್ ಮಾತಾಡ್ತ ನೆಟ್ಟಗೆ ಮಾತಾಡಿದ್ರೆ ಮಾತಾಡ್ದೆ,ನನ್ನ ಹೆಸರು ಹೇಗೆ ಹೇಳಿದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಅಬ್ಬರ ಕೇಳಿದ ಪಾವಗಡ ಮಂಜು ಬರುವಷ್ಟು ಹೊತ್ತಿಗೆ, ನಾನು ಅವನ ಗರ್ಲ್ ಫ್ರೆಂಡ್ ಇರಬಹುದು, ಹೆಂಡ್ತಿ ಇರಬಹುದು ತಂಗಿ ಇರಬಹುದು ಆದರೆ ಮಾತನಾಡಲು ಇವರಿಗೇನು ಅಧಿಕಾರ ಎಂದು ದಿವ್ಯಾ ಪ್ರಶ್ನಿಸಿದ್ದಾರೆ.
ದಿವ್ಯಾ ಪ್ರಶ್ನೆಯಿಂದ ತತ್ತರಿಸಿದ ಸಂಬರಗಿ ನಾನು ಫ್ರೆಂಡ್ ಅಂತಾ ಹೇಳ್ದೆ ತಪ್ಪೇ ಎಂದು ತಮ್ಮ ತಪ್ಪನ್ನು ಮುಚ್ಚಿಕೊಂಡು ಸಮರ್ಥಿಸ ಹೊರಟಿದ್ದಾರೆ.
ಅಷ್ಟೇ ಇದಕ್ಕೆ ದಿವ್ಯಾ ‘ವಾವ್ ಪ್ರಶಾಂತ್ ಸಂಬರಗಿ’ ಎಂದು ಚಪ್ಪಾಳೆ ತಟ್ಟಿ ಹೋಗಿದ್ದಾರೆ. ಆ ದೃಶ್ಯ ಹೇಗಿತ್ತು ಅಂದ್ರೆ ಹಳೆಯ ಬಟ್ಟೆಯಲ್ಲಿ ಹಳೆ ಚಪ್ಪಲಿ ಕಟ್ಟಿ ರಪ್ ರಪ್ ರಪ್ ಎಂದು ಹೊಡೆದ ಹಾಗಿತ್ತು.