“ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತೀರಿ” ಎಂದು ಬೆದರಿಸಿ ಪ್ರತಿ ತಿಂಗಳು ಗೂಗಲ್ ಪೇ ಆಪ್ ಮೂಲಕ ಮಾಮೂಲಿ ಪಡೆಯುತ್ತಿದ್ದ ಕದ್ರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪ್ರಶಾಂತ್ ಶೆಟ್ಟಿಯನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ|ಪಿ.ಎಸ್ ಹರ್ಷ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಗರದ ಕಂಕನಾಡಿಯ ಯೂನಿಸೆಕ್ಸ್ ಪಾರ್ಲರ್ ಮಾಲಕರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಶಾಂತ್ ಶೆಟ್ಟಿ ಮಾಮೂಲಿ ಪಡೆಯುತ್ತಿದ್ದ.
ಪ್ರಶಾಂತ್ ಶೆಟ್ಟಿ ಹಣದಾಹದಿಂದ ಬೇಸತ್ತ ಮಾಲೀಕರು ಕೊನೆಗೆ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದರು. ಈ ವೇಳೆ ಸಿಸಿ ಕ್ಯಾಮರಾ ದಾಖಲೆ ಮತ್ತು ಆಡಿಯೋ ದಾಖಲೆಯನ್ನು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅಮಾನತು ಆದೇಶ ಹೊರ ಬಿದ್ದಿದೆ.
ಇನ್ನು ಈ ಮಾಮೂಲಿ ದಂಧೆಯಲ್ಲಿ ಪ್ರಶಾಂತ್ ಶೆಟ್ಟಿ ಮಾತ್ರವಲ್ಲದೆ ಠಾಣೆಯ ಇತರ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಯೂ ಪಾಲ್ಗೊಂಡಿರುವ ಶಂಕೆ ಇದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸಮಗ್ರ ತನಿಖೆ ನಡೆಸುವುದು ಸೂಕ್ತ.
Discussion about this post