4 ವಿಮಾನ ನಿಲ್ಲುವ ಸ್ಥಳವನ್ನು 10 ಏರ್ ಬಸ್, ಬೋಯಿಂಗ್ ನಿಲ್ಲಿಸೋ ತನಕ ವಿಸ್ತರಣೆ
ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ನ ಹೊಸ ಕಟ್ಟಡದ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಲಾದ್ ಜೋಶಿ ಇಂದು ವೀಕ್ಷಿಸಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಹೊಸ ಕಟ್ಟಡದ ಕಾಮಗಾರಿಯ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ವಿಮಾನ ನಿಲ್ಲಿಸುವ ಪ್ರದೇಶದ ವಿಸ್ತರಣೆ ಕುರಿತು ಚರ್ಚಿಸಲಾಯಿತು. ನಂತರ ಮಾತನಾಡಿದ ಅವರು, ಈಗಾಗಲೇ ತಾತ್ವಿಕವಾಗಿ ಈ ಕಾಮಗಾರಿಕೆಗೆ ಒಪ್ಪಿಗೆ ನೀಡಿದ್ದು ಆದಷ್ಟು ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು.
ಸದ್ಯಕ್ಕೆ ನಾಲ್ಕು ವಿಮಾನ ನಿಲ್ಲುವ ಸ್ಥಳವನ್ನು ಸುಮಾರು ಹತ್ತು ಏರ್ ಬಸ್, ಬೋಯಿಂಗ್ ನಿಲ್ಲಿಸುವಷ್ಟು ಪ್ರದೇಶವನ್ನು ವಿಸ್ತರಿಸಲಾಗುವುದು ಎಂದರು.
ಇದೇ ಮಾರ್ಚ್ ೧೦ ರಂದು ಪ್ರಧಾನಿ ಶ ನರೇಂದ್ರ ಮೋದಿ ಅವರು ೨೭೩ ಕೋಟಿ ರೂಪಾಯಿ ವೆಚ್ಚದ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಾಮಗಾರಿಗೆ ಚಾಲನೆ ನೀಡಿದ್ದರು.
ವೇಗವಾಗಿ ಕಾಮಗಾರಿ ಸಾಗುತ್ತಿದ್ದು ಇದರಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಮೇಲ್ದರ್ಜೆಯ ಸೌಲಭ್ಯಗಳು ಒದಗಲಿವೆ ಎಂದು ತಿಳಿಸಿದರು.