ಇನ್ಮುಂದೆ ನೀಲಿ ಬಣ್ಣದ ಸಮವಸ್ತ್ರದಲ್ಲಿ ಪೌರ ಕಾರ್ಮಿಕರು
ಪೌರ ಕಾರ್ಮಿಕರ ಸಂಘಗಳ ಬೇಡಿಕೆಗೆ ಮಣಿದಿರುವ ಬಿಬಿಎಂಪಿ ಕೊನೆಗೂ ಪೌರ ಕಾರ್ಮಿಕರ ಸಮವಸ್ತ್ರ ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.
ಹೀಗಾಗಿ ಇನ್ನು ಮುಂದೆ ನೀಲು ಬಣ್ಣದ ಸಮವಸ್ತ್ರದಲ್ಲಿ ಪೌರ ಕಾರ್ಮಿಕರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈ ಸಮವಸ್ತ್ರದಲ್ಲಿ ಬಿಬಿಎಂಪಿಯ ಲೋಗೋ ಕೂಡಾ ಇರಲಿದೆ.
ಸಮವಸ್ತ್ರ ಸಂಬಂಧ ಈಗಾಗಲೇ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಕಾರ್ಯಾದೇಶ ನೀಡಲಾಗಿದ್ದು, ಶೀಘ್ಪರದಲ್ಲೇ ನೀಲಿ ಸಮವಸ್ತ್ರ ವಿತರಣೆಯಾಗಲಿದೆ.
ಬಿಬಿಎಂಪಿಯಲ್ಲಿ 12,081 ಮಹಿಳಾ ಪೌರ ಕಾರ್ಮಿಕರು ಮಕ್ಕು 3069 ಪುರುಷ ಪೌರ ಕಾರ್ಮಿಕರ ಸೇರಿ ಒಟ್ಟು 15,150 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರಸಕ್ತ ಅರ್ಧ ವರ್ಷಕ್ಕೆ ಒಂದು ಜೊತೆ ಸಮವಸ್ತ್ರ ಪೂರೈಕೆಯಾಗಲಿದ್ದು, ಮುಂದಿನ ವರ್ಷದಿಂದ ಮಹಿಳಾ ಪೌರ ಕಾರ್ಮಿಕರಿಗೆ ಎರಡು ಸೀರೆ, ಒಂದು ಸ್ವೇಟರ್, ಟೋಪಿ ಹಾಗೂ ಎರಡು ಕೋಟ್ ಮತ್ತು ಪುರುಷ ಪೌರ ಕಾರ್ಮಿಕರಿಗೆ ಎರಡು ಟೀ ಶರ್ಟ್, ಎರಡು ಟ್ರ್ಯಾಕ್ ಪ್ಯಾಂಟ್, ಒಂದು ಸ್ವೇಟರ್ ಮತ್ತು ಟೋಪಿ ನೀಡಲಾಗುತ್ತದೆ.
ಮಹಿಳಾ ಪೌರ ಕಾರ್ಮಿಕರ ಒಂದು ಜೊತೆ ಸಮವಸ್ತ್ರಕ್ಕೆ 4811 ರೂಪಾಯಿ ಹಾಗೂ ಪುರುಷ ಪೌರ ಕಾರ್ಮಿಕರ ಸಮವಸ್ತ್ರಕ್ಕೆ 3578 ರೂಪಾಯಿ ನಿಗದಿಪಡಿಸಲಾಗಿದ್ದು, GST ಒಳಗೊಂಡ ಹಾಗೆ ಸಮವಸ್ತ್ರಕ್ಕಾಗಿಯೇ 7.25 ಕೋಟಿ ರೂಪಾಯಿ ವೆಚ್ಚವಾಗಲಿದೆ.
Solid waste management officials of BBMP have decided to procure new uniforms for pourakarmikas at a cost of Rs 7.3 crore and will consult them on the colour and texture of the clothing. The move comes in the wake of the pourakarmikas demanding new, blue uniforms in place of the green and orange ones