ಮುಂಬೈ : ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆ ತೆಗೆದುಕೊಳ್ಳಿ, ದೇಶವನ್ನು ಸಾಂಕ್ರಾಮಿಕ ರೋಗದಿಂದ ಮುಕ್ತ ಮಾಡೋಣ ಎಂದು ಸರ್ಕಾರ ಮನವಿ ಮಾಡುತ್ತಿದ್ದಾರೆ. ಆದರೆ ಕೆಲವರು ಉಡಾಫೆ ಮನೋಭಾವನೆ ತಳೆದಿದ್ದು ಲಸಿಕೆ ತೆಗೆದುಕೊಳ್ಳುವುದಿಲ್ಲ ಅಂದಿದ್ದಾರೆ. ಲಸಿಕೆಯ ಪ್ರಯೋಜನ ಈಗಾಗಲೇ ವಿಶ್ವ ಮಟ್ಟದಲ್ಲಿ ಸಾಬೀತಾಗಿದ್ದರೂ, ಲಸಿಕೆ ತೆಗೆದುಕೊಳ್ಳಲು ಈ ಮಂದಿ ಸಿದ್ದವಿಲ್ಲ.
ಈ ನಡುವೆ ಕೊರೋನಾ ಲಸಿಕೆ ತೆಗೆದುಕೊಳ್ಳಲು ಈ ಹಿಂದೆ ನಿರಾಕರಿಸಿ ಸುದ್ದಿಯಾಗಿದ್ದ ನಟಿ 51 ವರ್ಷದ ಪೂಜಾ ಬೇಡಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸೋಂಕು ತಗುಲಿದ ಬಳಿಕವೂ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿರುವ ಅವರು, ಸ್ವಂತ ಇಮ್ಯುನಿಟಿಯಿಂದ ಗುಣಮುಖರಾಗುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಇನ್ಸ್ಟಾದಲ್ಲಿ ವಿಡಿಯೋ ಹಾಕಿರುವ ಅವರು, ನನಗೆ ಮತ್ತು ನನ್ನ ಪತಿಗೆ ಕೊರೋನಾ ಸೋಂಕು ಪಾಸಿಟಿವ್ ಬಂದಿದೆ. ಈಗ್ಲೂ ಸಹ ನಾನು ಲಸಿಕೆ ತೆಗೆದುಕೊಳ್ಳೋದಿಲ್ಲ. ಲಸಿಕೆ ತೆಗೆದುಕೊಳ್ಳುವುದು ಮತ್ತು ನಿರಾಕರಿಸುವುದು ನನ್ನ ವೈಯುಕ್ತಿಕ ವಿಚಾರ. ನನ್ನ ಸ್ವಂತ ರೋಗ ನಿರೋಧಕ ಶಕ್ತಿಯಿಂದ ಗುಣಮುಖನಾಗುತ್ತೇನೆ ಅಂದಿದ್ದಾರೆ.
Discussion about this post